ಸಾಗರ ನ್ಯೂಸ್…

05/01/2022 ಬುಧವಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನಗರಸಭೆ ಆವರಣದಲ್ಲಿ ಸಾಗರ ತಾಲ್ಲೂಕಿನ ಬೀದಿ ಬದಿ ವ್ಯಾಪಾರಸ್ಥರ ಪ್ರಮುಖರನ್ನು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಭೇಟಿ ಮಾಡಿ ಅಲ್ಲಿಯ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳ ಆಲಿಸಿದರು, ಅವರು ತಮ್ಮ ಕುಂದು ಕೊರತೆಗಳ ಮನವಿಯನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದರು.

ಹೂಸದಾಗಿ ಆಯ್ಕೆಯಾದ ಟಿವಿಸಿ ಸದಸ್ಯರಿಗೆ ಅವರ ಕರ್ತವ್ಯ ಹಕ್ಕುಗಳ ಮಾಹಿತಿ ಬಗ್ಗೆ ಅಷ್ಟೇನೂ ತಿಳಿಯದು, ಅವರಿಗಾಗಿ ಒಂದು ದಿನದ ಕಾರ್ಯಾಗಾರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೋತೆ ತರಬೇತಿ ಇರುತ್ತದೆ, ಅದರಲ್ಲಿ ಎಲ್ಲಾ ಟಿವಿಸಿ ಸದಸ್ಯರು ಭಾಗವಹಿಸಿ ತಮ್ಮ ಕರ್ತವ್ಯದ ಬಗ್ಗೆ ತಿಳಿದುಕೊಳ್ಳಿ, ಈ ಬಾರಿ ನಿಜವಾದ ಮಹಿಳಾ ಮತ್ತು ಅಂಗವಿಕಲರು, ಆರ್ಥಿಕ ದುರ್ಬಲ ವರ್ಗದ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಬೈಯೋಮೆಟ್ಟಿಕ್ ಜಿಪಿಎಸ್ ನೊಂದಿಗೆ ಗುರುತಿನ ಚೀಟಿ ನೀಡಬೇಕು ಅದಕ್ಕೆ ಟಿವಿಸಿ ಸದಸ್ಯರ ಶ್ರಮ ಪ್ರಮುಖವಾಗಿದೆ.

ಬಹಳಷ್ಟು ಬೀದಿ ಬದಿಯ ವ್ಯಾಪಾರಿಗಳಿಗೆ ವಿದ್ಯಾಬ್ಯಾಸ ತಿಳಿಯದು ಅವರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಓದಿ ಹೇಳಲು ಬೂತ್, ವಾರ್ಡ್, ವಲಯಗಳ ಅಧ್ಯಕ್ಷರ ನೇಮಕ ಮಾಡಿ ಅವರುಗಳ ಮೂಲಕ ಸರ್ಕಾರದ ಸೌಲಭ್ಯಗಳ ನಿಜವಾದ ವ್ಯಾಪಾರಿಗಳಿಗೆ ತಲ್ಲುಪಿಸಲು ಹೇಳಿದರು. ಬೀದಿ ಬದಿ ವ್ಯಾಪಾರಿಗಳು ಒಗ್ಗಟ್ಟಾಗಲು ಸಂಘಟನೆಗೆ ಕರೆ ನೀಡಿದರು. ತಿಂಡಿ ತಿನಿಸುಗಳು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಫುಡ್ ಸೇಫ್ಟಿ ಅಧಿಕಾರಿಗಳಿಂದ 30ಜನರ ಗುಂಪಿಗೆ ತರಬೇತಿ ನೀಡಲಾಗುವುದು, ಟಿವಿಸಿ ಸದಸ್ಯರು ಅವರನ್ನು ಗುರುತಿಸಿ ಅವರಿಗೆ ತರಬೇತಿ ಪಡೆಯಲು ಪ್ರೋತ್ಸಾಹ ನೀಡಿ ಎಂದು ಹೇಳಿದರು. ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಿಗೆ ಸನ್ಮಾನ್ಯ ಮಾಡಿದರು.

ಈ ಸಂದರ್ಭದಲ್ಲಿ ಸಾಗರ ತಾಲ್ಲೂಕಿನ ನಗರಸಭೆಯ ಟಿವಿಸಿ ಸದಸ್ಯರಾದ ಶ್ರೀ ಸೈಯದ್ ಮಹಮ್ಮದ್ ಜೀಲಾನಿ, ಶ್ರೀ ಮುಬಾರಕ್, ಶ್ರೀ ಸಂತೋಷ್, ಶ್ರೀ ಮತಿ ಉಷಾ, ಶ್ರೀ ಮತಿ ಸರಸ್ವತಿ, ಶ್ರೀ ಮತಿ ಶಾಂತಮ್ಮ, ಶ್ರೀ ಮನೋಹರ್, ಶ್ರೀ ಲಿಂಗರಾಜ್, ಶ್ರೀ ಚೌಧರಿ, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇತರರೂ ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ…