ಕೇಂದ್ರ ಸರ್ಕಾರ ಜನರ ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ನಿರಂತರವಾಗಿ ಪದೇಪದೆ ಬೆಲೆ ಗಳನ್ನು ಏರಿಕೆ ಮಾಡುತ್ತಿದ್ದು ,ಈಗ ಪುನ: ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಏರಿಸಿದ್ದು ಖಂಡನೀಯವಾಗಿರುತ್ತದೆ .ಅಡುಗೆ ಅನಿಲ ಸಿಲಿಂಡರಿಗೆ 1 ಸಾವಿರೂ ಗಳಾಗಿದ್ದು ಜೊತೆಯಲ್ಲಿಅಡುಗೆ ಎಣ್ಣೆ ಸಹ ಇನ್ನೂರ ರೂಪಾಯಿಗಳ ವರೆಗೆ ಏರಿಕೆಯಾಗಿದೆ .ಇತರೆ ದವಸ ಧಾನ್ಯಗಳು ಜನರು ದಿನನಿತ್ಯ ಬಳಕೆ ಮಾಡುವ ವಸ್ತುಗಳ ದರವೂ ಗಗನಕ್ಕೇರಿತ್ತು . ಜನರು ಜೀವನ ಮಾಡದಿರುವಂತಹ ಸ್ಥಿತಿಗೆ ಬಂದು ನಿಂತಿರುತ್ತದೆ .ಕೇಂದ್ರ ಸರ್ಕಾರವು ಪದೇ ಪದೇ ಈ ರೀತಿ ದಿನನಿತ್ಯ ವಸ್ತುಗಳ ದರವನ್ನು ಏರಿಸುತ್ತಿರುವುದು ಶ್ರೀ ಸಾಮಾನ್ಯ ಜನರ ಬದುಕಿಗೆ ಮಾರಕವಾಗಿರುತ್ತದೆ .ಎಂಬುದಾಗಿ ತಾಲ್ಲೂಕು ಯುವ ಕಾಂಗ್ರೆಸ್ ಘಟಕವು ಇಂದು ಪ್ರತಿಭಟನೆ ನಡೆಸಿ ತೀರ್ಥಹಳ್ಳಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ .ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಅಮರನಾಥ ಶೆಟ್ಟಿ,ರಾಘವೇಂದ್ರ ಪುಟ್ಟೊಡ್ಲು
ಪ್ರಧಾನ ಕಾರ್ಯದರ್ಶಿಯಾದ ಸುಭಾಷ್ ಕುಲಾಲ್ ಕೋಣಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬಾ ರಾಘವೇಂದ್ರ ,ಕೆಳಕೆರೆ ಪೂರ್ಣೇಶ್ ಮತ್ತು ಮುತ್ತು ಗುಂಡಿ ಪ್ರವೀಣ್ ,ತಾರಾನಾಥ ಶೆಟ್ಟಿ ಮುಂತಾದವರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು .ಪ್ರತಿಭಟನೆಯ ನಂತರ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿಕೊಡಲು ತೀರ್ಥಹಳ್ಳಿ ತಹಸೀಲ್ದಾರ್ ರವರಿಗೆ ನೀಡಲಾಯಿತು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ