ನೆಹರು ಯುವ ಕೇಂದ್ರ ಹಾಗೂ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗದ ರೋಟರಿ ರಕ್ತನಿಧಿ ಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಶಿಬಿರಕ್ಕೆ ಶಿವಮೊಗ್ಗ ನಗರದ ದಕ್ಷ ಹಾಗೂ ಜನಪ್ರಿಯ ಅಧಿಕಾರಿ ಡಿವೈಎಸ್ ಪಿ ಪ್ರಶಾಂತ್ ಜಿ ಮುನ್ನೋಳಿ ರವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ನಾಗರಿಕರ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮತ್ತು ಸಮಿತಿಯ ಉಪಾಧ್ಯಕ್ಷರಾದ ರಮೇಶ್ ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಶಿವಮೊಗ್ಗ ವಿನೋದ್ ಮತ್ತು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ನ ವೆಂಕಟೇಶ್ ಹರ್ಷಿತ್ ಸಾಗರ್ ರಾಜೇಶ್ ಸಂತೋಷ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…