ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕರು ಹಾಗೂ ತೆರಿಗೆ ಸಲಹಾ ಸಮಿತಿ ಛರ‍್ಮನ್‌ರವರಿಂದ ೨೦೨೨-೨೦೨೩ನೇ ಸಾಲಿನ ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ವಿವರಗಳನ್ನೊಳಗೊಂಡ ಬಜೆಟ್ ಪೂರ್ವ ಜ್ಞಾಪನಾ ಪತ್ರವನ್ನು ಸಲಹೆಗಳೊಂದಿಗೆ ಶಿವಮೊಗ್ಗ ಜಿಲ್ಲಾ ಸಂಸದರಾದ ಶ್ರೀಮಾನ್ ಬಿ.ವೈ. ರಾಘವೇಂದ್ರರವರ ಮೂಲಕ ಸನ್ಮಾನ್ಯ ಕೇಂದ್ರ ಆರ್ಥಿಕ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಗೆ ಸಲ್ಲಿಸಲಾಯಿತು.ಮಾನ್ಯ ಸಂಸದರು ಸೂಕ್ತ ಸಮಯದಲ್ಲಿ ಮಾನ್ಯ ಆರ್ಥಿಕ ಸಚಿವರಿಗೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎನ್ ಗೋಪಿನಾಥ್, ತೆರಿಗೆ ಸಲಹಾ ಸಮಿತಿ ಛರ‍್ಮನ್‌ರಾದ ಇ. ಪರಮೇಶ್, ನಿರ್ದೇಶಕರುಗಳಾದ ಜಿ. ವಿಜಯಕುಮಾರ್, ಮಧುಸೂದನ ಐತಾಳ್, ಟಿ.ಎನ್ ಲಕ್ಷ್ಮಿಕಾಂತ್, ಜಗದೀಶ್ ಮಾತನವರ್, ಗಣೇಶ ಎಂ. ಅಂಗಡಿ, ಮರಿಸ್ವಾಮಿ ಉಪಸ್ಥಿತರಿದ್ದರು.