ಶಿವಮೊಗ್ಗ : ನಗರದ ಸೂರ್ಯನರ್ಸಿಂಗ್ ಕಾಲೇಜಿನಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು “EPS” Effective Public Speach, ತರಬೇತಿಯನ್ನು ಆಯೋಜಿಸಲಾಗಿತ್ತು, ತರಬೇತಿಯನ್ನು ನ್ಯಾಷನಲ್ ಟ್ರೈನರ್ ಜೆಸಿ. ವಿಲಿಯಮ್ ಡಿಸೋಜಾ ರವರು ನಡೆಸಿಕೊಟ್ಟರು, ತರಬೇತಿಯ ಕಾರ್ಯಕ್ರಮದ ಉದ್ಘಾಟನೆಯನ್ನು ಘಟಕದ ಅಧ್ಯಕ್ಷರಾದ ಜೆಸಿ.ಸೌಮ್ಯ ಅರಳಪ್ಪ, ಛೇರ್ ಪರ್ಸನ್, ಜೆಸಿ,ಸ್ವಪ್ನ ಸಂತೋಷ್ ಗೌಡ ರವರು ನೆರವೇರಿಸಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ನಿರ್ದೇಶಕರು ಜೆಸಿ. ಟಿ ನೇತ್ರಾವತಿ, ಹಾಗೂ ಕಾರ್ಯದರ್ಶಿ ಜೆಸಿ.ಮಮತಾ ಶಿವಣ್ಣರವರುಗಳು ಉಪಸ್ಥಿತರಿದ್ದರು,
ತರಬೇತಿಯಲ್ಲಿ ಐಪಿಪಿ, ಜೆಸಿ. ಮೋಹನ್ ಕಲ್ಪತರು, ಜೆಸಿ.ಸಿಬ್ಗತ್ ಉಲ್ಲಾ, ಜೆಸಿ.ಚಿರಂಜೀವಿ ಬಾಬು, ಜೆಸಿ.ನವೀನ್ ತಲಾರಿ ಸೂರ್ಯನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ವೃಂದದವರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…