ಶಿವಮೊಗ್ಗದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದು ನೆಹರೂ ಕ್ರೀಡಾಂಗಣದಲ್ಲಿ ಸರ್ಕಾರಿ ಮಹಿಳಾ ನೌಕರರಿಗೆ ವಿವಿಧ ಮನೋರಂಜನಾತ್ಮಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ — ಅನಿತಾ ಕೃಷ್ಣ , ಹಾಗೂ ತಂಡ, ದ್ವಿತೀಯ ಸ್ಥಾನ–ಮಂಜುಳಾ ಎಸ್ ಮತ್ತು ತಂಡ ತೃತೀಯ ಸ್ಥಾನ–ಗೀತಾ ಆರ್.ಬಿ ಹಾಗೂ ತಂಡ ಗಳಿಸಿದರು.
ಅನಿತಕೃಷ್ಣ ತೀರ್ಥಹಳ್ಳಿ ಟೀಮ್ ,ಫೌಜಿಯಾ ಸರಾವತ್ ,ದೀಪ ನಂದಿನಿ ಬಾಳೇಕೋಡ್ಲು ,
ಉಮ್ಮಲಿ ಬಾಯಿ ಭಾಗವಹಿಸಿದ್ದರು
ಪ್ರಥಮ ಬಹುಮಾನ 5000 ರೂ ದ್ವಿತೀಯ ಸ್ಥಾನ 3000 ರೂ ತೃತೀಯ ಸ್ಥಾನ 2000 ರೂ ಬಹುಮಾನ ಏಪ್ರಿಲ್ 5 ಕ್ಕೆ ಕುವೆಂಪು ರಂಗಮಂದಿರದ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.
ಕ್ರೀಡಾಕೂಟದಲ್ಲಿ ಶ್ರೀ ಷಡಕ್ಷರಿ ರಾಜ್ಯಾಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಎಲ್ಲಾ ಪದಾಧಿಕಾರಿಗಳು ಸರ್ಕಾರಿ ನೌಕರರು ಪಂದ್ಯವನ್ನು ವೀಕ್ಷಿಸಿ ವಿಜೇತ ತಂಡಗಳಿಗೆ ಶುಭಕೋರಿದರು.