ತೀರ್ಥಹಳ್ಳಿ : ತಾಲೂಕಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಪರ್ತಕರ್ತರೊಬ್ಬರು ಅಲಂಕರಿಸಿದ್ದಾರೆ.

ಜಿಲ್ಲೆಯಲ್ಲಿ ಗ್ರಾಮಪಂಚಾಯತಿ ಚುನಾವಣೆ ನಡೆದ ಸಂದರ್ಭದಲ್ಲಿ ಮೂರ್ನಾಲ್ಕು ಮಂದಿ ಪತ್ರಕರ್ತರು ಆಯ್ಕೆಯಾಗಿದ್ದರು.ಅವರುಗಳಲ್ಲಿ ಸುಧೀರ್ಘ 20 ವರ್ಷಗಳ ಕಾಲದಿಂದಲೂ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಧಾತ ಅನಿಲ್ ಗೆ ತೀರ್ಥಹಳ್ಳಿ ತಾಲ್ಲೂಕಿನ ತ್ರಿಯಂಬಕಪುರ ಗ್ರಾಮಪಂಚಾಯತಿಯ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

ಕಳೆದ ಚುನಾವಣೆಯಲ್ಲಿ ತ್ರಿಯಂಬಕಪುರ ಗ್ರಾಮಪಂಚಾಯತಿಯ ವಿರೂಪಾಪುರ ಗ್ರಾಮದ ಜನತೆ ಪಂಚಾಯತಿಯಲ್ಲಿಯೇ ಅತ್ಯಧಿಕ ಬಹುಮತದಿಂದ ಪರ್ತಕರ್ತರೋರ್ವರನ್ನು ಸದಸ್ಯರಾಗಿ ಆಯ್ಕೆಯಾಗುವಂತೆ ಮಾಡಿದ್ದರು.

ಆ ಸಂದರ್ಭದಲ್ಲೇ ಅಧ್ಯಕ್ಷರಾಗುತ್ತಾರೆಂಬ ಮಾತುಗಳು ಕೇಳಿ ಬಂದಿತ್ತಾದರೂ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಅಧ್ಯಕ್ಷ ಸ್ಥಾನ ದೂರ ಉಳಿದ್ದಿದ್ದರೂ ಬಿಜೆಪಿಯ ಸಂಘಟನೆ ,ಕ್ಷೇತ್ರದ ಶಾಸಕರೂ ಹಾಗೂ ರಾಜ್ಯದ ಗೃಹಮಂತ್ರಿಗಳಾದಂತಹ ಆರಗ ಜ್ಞಾನೇಂದ್ರರವರು ಸದಸ್ಯರುಗಳಲ್ಲಾದ ಒಡಂಬಡಿಕೆಯಂತೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಅನಿಲ್ ವಿಧಾತರವರಿಗೆ ನೀಡಿದ್ದಾರೆ.

ಪಂಚಾಯತಿಯಲ್ಲಿ ಸಮಬಲದ ಹೋರಾಟವನ್ನು ವಿರೋಧ ಪಕ್ಷ ಮಾಡುವ ಅವಕಾಶವಿದ್ದರೂ ಬಿಜೆಪಿಯ ಸಂಘಟನಾ ಶಕ್ತಿ ಮತ್ತು ಅನಿಲ್ ರವರ ಜನಪ್ರಿಯತೆ ಅವಿರೋಧ ಆಯ್ಕೆಗೆ ಅವಕಾಶ ಕಲ್ಪಿಸಿದ್ದು ವಿರೂಪಾಪುರ ಗ್ರಾಮದ ಜನತೆ ತಮ್ಮ ಸದಸ್ಯ ಅಧ್ಯಕ್ಷರಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಲಿದೆ.