ಮಂಜುನಾಥ್ ಶೆಟ್ಟಿ…

ಗಾಂಜಾ ಸೇರಿದಂತೆ ಮಾದಕ ವಸ್ತುಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಶ್ವತಿ ಮಹಿಳಾ ವೇದಿಕೆಯ ಅಧ್ಯಕ್ಷ ಡಾ ಶಾಂತ ಸುರೇಂದ್ರ ಅವರ ನೇತೃತ್ವದಲ್ಲಿ ವೇದಿಕೆ ಸದಸ್ಯರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಇತ್ತೀಚಿಗೆ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು. ಶಾಲೆಯ ಮಕ್ಕಳು ಕೈಗೆ ಸುಲಭವಾಗಿ ಸಿಗುವುದರಿಂದ ಮಾದಕ ಸೇವನೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮಕ್ಕಳ ಕ್ಷೇಮವೇ ಜನರ ಕ್ಷೇಮವಾಗಿದೆ. ಅದರಿಂದ ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು.ಶಾಲೆಗಳ ಹತ್ತಿರ ಇರುವ ಖಾಲಿ ಜಾಗಗಳಲ್ಲಿ ಇಸ್ಪೀಟು ಸೇರಿದಂತೆ ಯಾವುದೇ ಜುಜಾಟಕ್ಕೆ ಅವಕಾಶ ಕೊಡಬಾರದು ಮತ್ತು ಅಲ್ಲಿ ಗಾಂಜಾ ಕೂಡ ಮಾರಾಟವಾಗುತ್ತದೆ. ಅದನ್ನು ತಡೆಯಬೇಕು ಗಾಂಜಾ ಮಾರಾಟ ಮಾಡುವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇತ್ತೀಚಿಗಿಂತ ಪ್ರಕರಣಗಳು ಹೆಚ್ಚಾಗುತ್ತಿವೆ.

ಅದರಿಂದ ಕೂಡಲೇ ಕಠಿಣ ಕ್ರಮ ಕೈಗೊಂಡು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಪ್ರಮುಖರಾದ ಶಿಲ್ಪಾ ಸತೀಶ್ ಶಾಂತಕ್ಕ ಚಂದ್ರಮತಿ ಹೆಗಡೆ ಪುಷ್ಪ ದೀಪ ಮಂಜುನಾಥ್ ಸಂಗೀತ ಪ್ರೇಮ ಕಲಾ ಮಂಜುಳಾ ಗೀತಾ ಉಮಾ ಶಾರದಾ ದೀಪ ಸೋಮಶೇಖರ್ ಮಾಲ ಸಿಗಂದೀನಿ ರೇಣುಕಮ್ಮ ಜಯಂತಿ ಲೀಲಾ ಲಲಿತಾ ಮೀನಾ ಸುಮಾ ದೀಪ ಚೈತ್ರ ಸಾಯಿನಾಥ್ ಮಂಜುಳಮ್ಮ ಸುಜಾತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *