ಮಂಜುನಾಥ್ ಶೆಟ್ಟಿ…

ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿರುವ ನಡುವೆಯೇ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಈ ಪ್ತಕರಣದಲ್ಲಿ ಪತ್ತೆಯಾದ ಆರೋಪಿ ಅಜರ್ ಯಾನೆ ಫುಕು ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಆದರೂ ಆತನ ಹಾವಳಿ ಮುಂದುವರೆದಿದೆ.

ದಿನಾಂಕ 01-03-2026 ರಂದು ಸಂಜೆ 05.00 ಗಂಟೆಗೆ ದೊಡ್ಡಪೇಟೆ ಪೊಲೀಸ್ ಠಾಣಾ ಸರಹದ್ದಿನ ಇಲಿಯಾಜ್ ನಗರ ಫಾತಿಮಾ ರಸ್ತೆ, ಮೌಂಟ್ ಹಿರಾ ಶಾಲೆಯ ಹತ್ತಿರ ತುಂಗಾ ಚಾನಲ್ ಬಳಿ 02 ಜನ ಆರೋಪಿತರು ಸ್ಕೂಟಿಯನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುತ್ತಾರೆಂಬ ಮಾಹಿತಿ ಮೇರೆಗೆ ಪಿಎಸ್ಐ ನಾರಾಯಣ ಮಧುಗಿರಿ ರವರು ಠಾಣಾ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತರಿಂದ 1) 02 ಕೆಜಿ 66 ಗ್ರಾಂ ತೂಕದ ಒಣ ಗಾಂಜಾ, 2) ಕೆಎ 14 ಇಎಫ್ 1649 ಸ್ಕೂಟಿಯನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಪ್ರಕರಣದ ಎ1 ಆರೋಪಿಯಾದ ಮೊಹಮ್ಮದ್ ಹಮ್ಮದ್ ಅಜರುದ್ದೀನ್ @ ಅಜರ್ @ ಫುಕು ತಂದೆ ಮೊಹಮ್ಮದ್ ಹಮ್ಮದ್ ಷರೀಪ್ 28 ವರ್ಷ, ಮುಸ್ಲಿಂ ಜನಾಂಗ, ಬಟ್ಟೆ ವ್ಯಾಪಾರ, ವಾಸ ಶಾದಾಬ್ ಶಾದಿ ಮಹಲ್ ಹತ್ತಿರ, ಸವಾಯಿಪಾಳ್ಯ ಮುಖ್ಯರಸ್ತೆ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಎ2 ಆರೋಪಿ ವಸೀಂ ಅಕ್ರಂ @ ಸೈಲೆಂಟ್, @ ಗೋಗೋ ತಂದೆ ಮಹಮ್ಮದ್ ಫಯಾಜ್ 24 ವರ್ಷ, ಮುಸ್ಲಿಂ ಜನಾಂಗ, ವಾಸ ವಾದಿಹುದಾ ಶಿವಮೊಗ್ಗ ಈತನು ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಸಿಬ್ಬಂದಿಯವರ ತಂಡ ರಚನೆ ಮಾಡಲಾಗಿದೆ.

ಆರೋಪಿ ಅಜರ್ ಯಾನೆ ಪುಕು ಮೇಲೆ ಈ ಹಿಂದೆ ಕೆಳಕಂಡ ಪ್ರಕರಣಗಳು ದಾಖಲಾಗಿರುತ್ತವೆ. ರಾಬರಿ ಪ್ರಕರಣಗಳು, 2022 ರಲ್ಲಿ ಒಟಿ ರಸ್ತೆಯಲ್ಲಿದ್ದ ಟೀ ಸ್ಟಾಲ್ ಗೆ ನುಗ್ಗಿ ದಾಂಧಲೆ ನಡೆಸಿ ಹಿಂದೂ ವಿರೋಧಿ ಘೋಷಣೆಗಳನ್ನ ಕೂಗಿದ್ದ ಪ್ರಕರಣ, 2022 ರಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ಮೇಲೆ ಹಲ್ಲೆ ಮಾಡಿ ಆರ್ ಎಸ್ ಎಸ್ ಬಜರಂಗ ದಳದವ ಬರೋ ಎಂದು ದಾಳಿ ನಡೆಸಿ ಪ್ರಕರಣ, 2025 ರಲ್ಲಿ ಗಾಂಜಾ ಹುಡುಕಿಕೊಂಡು ಹೋದ ಯುವಕರ ಮೇಲೆ ಹಲ್ಲೆ ಮತ್ತು ರಾಬರಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದನು.

ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್ 406/2021 ಕಲಂ 143, 147, 148, 323, 324 307 504 506 ರೆ/ವಿ 149 ಐಪಿಸಿ, 2)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್ 147/2022 ಕಲಂ 399, 402 ಐಪಿಸಿ, 3)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್419/2022 ಕಲಂ 324, 354, 448, 427, 505(1) ಐಪಿಸಿ ಮತ್ತು ಕಲಂ 02 ಕೆ.ಪಿ.ಡಿ.ಎಲ್.ಪಿ ಕಾಯಿದೆ, 4)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್418/2022 ಕಲಂ 323, 307, 506 ರೆ.ವಿ 34 ಐಪಿಸಿ, 5)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್282/2025 ಕಲಂ 189(2), 191(2), 191(3), 352, 308(2), 109(1), 118(1), 115(2), 351(2) ಸಹಿತ 190 ಬಿಎನ್ ಎಸ್ -2023, 6)ತುಂಗಾನಗರ, ಪೊಲೀಸ್ ಠಾಣೆ, ಗುನ್ನೆ ನಂಬರ್712/2022 ಕಲಂ 8(ಸಿ) 20( ಬಿ) ಎನ್ ಡಿಪಿಎಸ್ ಕಾಯಿದೆ.

Leave a Reply

Your email address will not be published. Required fields are marked *