ಮಂಜುನಾಥ್ ಶೆಟ್ಟಿ…

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಹಾಗೂ ಉಪವಿಭಾಗದ ವತಿಯಿಂದ ಮಾರ್ಚ್ 08 ರಂದು 2025-26ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.


ಕಿದ್ವಾಯಿ ಶಾಲೆ ಪಕ್ಕ ಆರ್.ಎಂ.ಎಲ್. ನಗರ, ದುರ್ಗಿಗುಡಿ ಸರ್ಕಾರಿ ಶಾಲೆ ಹತ್ತಿರ, ಶಿವಪ್ಪ ನಾಯಕ ಅರಮನೆ ಮುಂಭಾಗ ಕೋಟೆ ರಸ್ತೆ, ಅಶೋಕ ನಗರದ ನಂದಿನಿ ಬೂತ್ ಹತ್ತಿರ ಹಾಗೂ ಇಂದಿರಾ ಗಾಂಧಿ ಬಡಾವಣೆ ಐಜಿ ಸರ್ಕಲ್ ಬಸ್ ಸ್ಟಾö್ಯಂಡ್ ಹತ್ತಿರ ಈ ಸ್ಥಳಗಳಲ್ಲಿ ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗುತ್ತಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸಬೇಕು.

ಇಲ್ಲವಾದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಮಂಡಳಿಯೊAದಿಗೆ ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿ ನಿರ್ವಹಣಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಬಿಯಂತರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *