ಕನಕಪುರ ನ್ಯೂಸ್…

ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕನಕಪುರ ತಂಡ ಆಯ್ಕೆಯಾಗಿದೆ.ಇದೇ ತಿಂಗಳ 16 ರಿಂದ 22 ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 14 ವರ್ಷದೊಳಗಿನ 2ನೇ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕನಕಪುರದ ತಂಡಗಳು ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು, ಇವರಿಗೆ ಸೇಂಟ್ ಮೈಕಲ್ ಶಾಲಾ ಆವರಣದಲ್ಲಿ ರಾಮನಗರ ಜಿಲ್ಲಾ ನೆಟ್ಬಾಲ್ ಸಂಸ್ಥೆಯು ತರಬೇತಿಯನ್ನು ನೀಡುತ್ತಿದೆ.

ಬಾಲಕರ ತಂಡ:- ಚಂದ್ರಮೌಳಿ (ನಾಯಕ), ಸಚೇತ್ MS, ಹರ್ಷ K, ಹೇಮಂತ್ KM, ಯಶಸ್ ಪಟೇಲ್ DC, ವಿಘ್ನೇಶ್ SH, ಆಕಾಶ್ ಗೌಡ, ಮೋಹನ್ ಗೌಡ, ದರ್ಶಿತ್ M, ಪ್ರಜ್ವಲ್ ಗೌಡ K. ಆಯ್ಕೆಯಾಗಿದ್ದಾರೆ.

ಬಾಲಕಿಯರ ತಂಡ:- ಹೃತಿಕ (ನಾಯಕಿ), ಪ್ರಗತಿ TK, ಭುವನ, ನಿಸರ್ಗ S, ಲಿಖಿತ S, ಹರ್ಷಿತ S, ಸಮೃತಾ N ಯಾದವ್, ಚಂದನ GA ಆಯ್ಕೆಯಾಗಿದ್ದಾರೆ.ಇವರಿಗೆ ರಾಮನಗರ ಜಿಲ್ಲಾ ನೆಟ್ಬಾಲ್ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್ CS, ನಾಚಿ ನಾಗರಾಜು ಉಪಾಧ್ಯಕ್ಷರು, ಮೋಹನ್ TS ಕಾರ್ಯದರ್ಶಿಗಳು, ಧನಶೇಖರ್ V ಜಂಟಿ ಕಾರ್ಯದರ್ಶಿಗಳು, ರಾಮಚಂದ್ರ KM ಖಜಾಂಚಿ, ಲೋಕೇಶ್ KT ಜಂಟಿ ಕಾರ್ಯದರ್ಶಿಗಳು ಸಂಸ್ಥೆಯ ಎಲ್ಲಾ ಸದಸ್ಯರು ಮತ್ತು ಪೋಷಕರು ಕ್ರೀಡಾಪಟುಗಳಿಗೆ ಸಹಕಾರ ನೀಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…