ಶಿವಮೊಗ್ಗ: ಸಂವಿಧಾನ ತಿದ್ದುಪಡಿ ಮಾಡಿ ಕೋಮು ಗಲಭೆಯನ್ನು ಸೃಷ್ಠಿಸಲು ಕಾರಣವಾಗುತ್ತಿರುವ ಬಹಿರಂಗವಾಗಿ ಪ್ರಧಾನಿ ಮೋದಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಹಾಗೂ ಸಾಮಾನ್ಯ ಹಿಂದೂ ಟೈಲರ್ ಕತ್ತು ಸೀಳಿ ಘೋರ ಕಗ್ಗೊಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳನ್ನು ನೇಣುಗಂಭಕ್ಕೇರಿಸುವ ಅಥವಾ ಗುಂಡು ಹೊಡೆದು ಸಾಯಿಸುವ ಕಠಿಣ ಕಾನೂನು ತರುವಂತೆ ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಶಿವಪ್ಪನಾಯಕ ವೃತ್ತದಲ್ಲಿ ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ್ದ ಕಾರಣಕ್ಕೆ ಕನ್ನಯ್ಯಾ ಲಾಲ್ ಎಂಬ ಟೈಲರ್ ನನ್ನು ಘೋರವಾಗಿ ಹತ್ಯೆಗೈದು ವಿಡಿಯೋ ವೈರಲ್ ಮಾಡಿ ತತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದಲ್ಲದೇ ಪ್ರಧಾನಿ ಮೋದಿ ಅವರಿಗೂ ಇದೇ ಗತಿ ಬರಲಿದೆ ಎಂದು ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ನಗರಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೊಲೆಗಡುಕರೇ ತಾವು ಕೊಲೆ ಮಾಡಿದ್ದು ಎಂದು ನೇರವಾಗಿ ಹೇಳಿದ ಮೇಲೆ ಕಾನೂನಿನ ಪ್ರಕಾರ ಅವರಿಗೆ ನ್ಯಾಯಾಲಯದಲ್ಲಿ ಕರೆದುಕೊಂಡು ಹೋದ ಮೇಲೂ ಕೂಡ ಅವರು ಇದೇ ಹೇಳಿಕೆ ನೀಡಿದಾಗ ಅವರನ್ನು ಅಲ್ಲೇ ಸಾಯಿಸುವಂತಹ ಕರಿಣ ಕಾನೂನು ತರಬೇಕು. ಪ್ರಜಾಪ್ರಭುತ್ವ ರೀತಿಯಲ್ಲಿ ಇಂತಹ ಉಗ್ರರನ್ನು ಖಂಡಿಸುವ ಕೆಲಸವಾದಾಗ ಮಾತ್ರ ಇಂತಹವರ ದಮನ ಸಾಧ್ಯ ಎಂದರು.
ನೂಪುರ್ ಶರ್ಮಾ ಹೇಳಿಕೆಗೆ ವಿಶ್ವದ ಅನೇಕ ಮುಸ್ಲಿಂ ರಾಷ್ಟ್ರಗಳು ಖಂಡನೆ ವ್ಯಕ್ತಪಡಿಸಿದ್ದವು. ತಕ್ಷಣ ಬಿಜೆಪಿ ಅವರನನ್ಉ ಹುದ್ದೆಯಿಂದ ಕೆಳಗಿಳಿಸಿತ್ತು. ಆದರೆ, ಈಗ ನಡೆದ ಹತ್ಯೆಗೆ ಮುಸ್ಲಿಂ ರಾಷ್ಟ್ರಗಳು ಮತ್ತು ಕಾಂಗ್ರೆಸ್ ನಾಯಕರು ಖಂಡನೆ ವ್ಯಕ್ತಪಡಿಸಿ ಯಾಕೆ ಹೇಳಿಕೆಗಳನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.ಒಬ್ಬನೇ ಒಬ್ಬಟೈಲರ್ ಏಕಾಂಗಿಯಾಗಿದ್ದಾಗ ಬರ್ಬರವಾಗಿ ಹತ್ಯೆಗೈದು ಬಡಾಯಿಕೊಚ್ಚಿಕೊಳ್ಳುತ್ತಿರುವ ಕೊಲೆಗಡುಕರನ್ನು ಹಿಂದೂ ಸಮಾಜ ಕ್ಷಮಿಸುವುದಿಲ್ಲ. ಕನ್ನಯ್ಯಾ ಲಾಲ್ ಕುಟುಂಬದ ಜೊತೆಗೆ ಇಡೀ ಹಿಂದೂ ಸಮಾಜ ಇದೆ. ವಿಶ್ವ ಸಂಸ್ಥೆ ಕೂಡ ಇಂತಹ ಘಟನೆಗಳಾದಾಗ ಮತ್ತು ಘಟನೆಯ ಹಿಂದಿರುವ ಭಯೋತ್ಪಾದಕರ ವಿರುದ್ಧ ಮತ್ತು ಅವರಿಗೆ ಬೆಂಬಲ ನೀಡುವ ಸಮುದಾಯದ ವಿರುದ್ಧ ಕಠಿಣಕ್ರಮತಕೈಗೊಳ್ಳಬೇಕೆಂದು ಒತ್ತಾಯಿಸಿದರು.ಇಡೀ ವಿಶ್ವಕ್ಕೆ ನಾಯಕರೆನಿಸಿಕೊಂಡ ಮೋದಿ ಅವರಿಗೆ ಕೊಲೆ ಬೆದರಿಕೆ ಇಂತಹ ಉಗ್ರರ ವಿರುದ್ಧ ವಿಶ್ವ ಸಂಸ್ಥೆ ಕೂಡಲೇ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕು ಎಂದರು.
ವಿದೇಶಿ ದಾಳಿಕೋರ ಬಾಬರ್ ಅಯೋಧ್ಯೆ ರಾಮಮಂದಿರ ಕೆಡವಿ ಮಸೀದಿ ಕಟ್ಟಿದ. ಮಥುರಾದಲ್ಲಿ ಕೃಷ್ಣನ ಮಂದಿರ ಕೆಡವಿ ಕೃಷ್ಣ ಜನಿಸಿದ ಜಾಗದಲ್ಲಿ ಮಸೀದಿ ಕಟ್ಟಿದ್ದಾರೆ. ಕಾಶಿಯಲ್ಲಿ ವಿಶ್ವನಾಥ ಮಂದಿರಕ್ಕೆ ಪಕ್ಕದಲ್ಲಿ ಮಸೀದಿ ಕಟ್ಟಿ ಮುಸ್ಲಿಮರು ಕೊಳದಲ್ಲಿರುವ ನಮ್ಮೆಲ್ಲರ ಆತ್ಮಲಿಂಗವಾದ ಶಿವಲಿಂಗವಿದ್ದರೂ ಅದೇ ನೀರಿನಲ್ಲಿ ಕೈಕಾಲು ತೊಳೆದು ಹಿಂದೂಗಳ ಪವಿತ್ರ ಭಾವನೆಗೆ ಧಕ್ಕೆ ತಂದಿದ್ದಾರೆ. ಇಷ್ಟೆಲ್ಲಾ ಆದರೂ ಹಿಂದೂಗಳು ತಾಳ್ಮೆಯಿಂದಿದ್ದಾರೆ ಎಂದು ಭಾವಿಸಿ ಇಂತಹ ಕುಕೃತ್ಯಗಳಿಗೆ ಕೈಹಾಕಿದರೆ, ಮುಂದಿನ ದಿನಗಳಲ್ಲಿ ಕನ್ನಯ್ಯಾ ಲಾಲ್ ಗೆ ಆದ ಗತಿಯೇ ಇಂತಹ ಕಿಡಿಗೇಡಿಗಳಿಗೂ ಆಗಲಿದೆ. ಹಿಂದೂ ಸಮಾಜ ಸುಮ್ಮನಿರುವುದಿಲ್ಲಎಂದರು.ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಬೆಳೆಯುತ್ತಿದೆ. ಪಾಕಿಸ್ತಾನದಲ್ಲಿ ಶೇ. 25 ರಷ್ಟು ಇದ್ದ ಹಿಂದೂಗಳು ಈಗ ಶೆ. 2.5 ರಷ್ಟು ಇಳಿದಿದ್ದಾರೆ. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ. ರಾಷ್ಟ್ರದ್ರೋಹಿ ಗೂಂಡಾಗಳಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಇದಕ್ಕೆಲ್ಲಾ ಪರಿಹಾರ ಎಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು. ಎಲ್ಲರಿಗೂ ಒಂದೇ ಕಾನೂನು ಒಂದೇ ಸಂವಿಧಾನ ಇರಬೇಕು. ಕೆಲವು ಕಿಡಿಗೇಡಿಗಳ ಕೃತ್ಯದಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ತೊಂದರೆ ಉಂಟಾಗುತ್ತದೆ. ದೇಶದ ಮುಸ್ಲಿಮರು ಮತತ್ಉ ಕಾಂಗ್ರೆಸ್ ನಾಯಕರು ಈ ಕೃತ್ಯವನ್ನು ಬಲವಾಗಿ ಖಂಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೂಡಾ ಅಧ್ಯಕ್ಷ ನಾಗರಾಜ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಮಾಜಿ ಶಾಸಕ ಆರ್.ಕೆ. ಸಿದ್ಧರಾಮಣ್ಣ, ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ವಿಶ್ವಾಸ್, ಅನಿತಾ ರವಿಶಂಕರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಮೋಹನ್ ರೆಡ್ಡಿ, ರಾಮು ಮೊದಲಾದವರಿದ್ದರು.