ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಕೋಡೂರಿನ ಶಾಂತಪುರ ಗ್ರಾಮದ ನಾಗರಾಜ್ ಎಂಬುವರ ಪತ್ನಿ ಅನುರಾಧ (45) ಎಂಬ ಮಹಿಳೆ ಸೋಮವಾರ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನಪ್ಪಿದ್ದಾರೆ.

ಸೋಮವಾರ ಮೃತ ಮಹಿಳೆಯ ಶವವನ್ನು ಮನೆಗೆ ತರಲಾಯಿತು ಆದರೆ ಮಂಗಳವಾರ ಮೃತ ಮಹಿಳೆ ಅನುರಾಧ ರವರ ಮಗಳು ಸ್ಪೂರ್ತಿ(18) ಎಂಬ ಯುವತಿ ಬಿ ಎಸ್ ಸಿ ಕೃಷಿ ಪದವಿಗೆ ಕೃಷಿ ಕೋಟದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು .ಅಮ್ಮನ ಶವ ಮನೆಯಲ್ಲಿದ್ದರೂ ಹಿರಿಯರ ಮನವೊಪ್ಪಿಸಿ ನೋವಿನಲ್ಲೇ ಪರೀಕ್ಷೆ ಬರೆದು ನಂತರ ಮನೆಗೆ ಬಂದ ಮೇಲೆ ಅಮ್ಮನ ಶವ ಸಂಸ್ಕಾರವನ್ನು ನೆರವೇರಿಸಲಾಯಿತು.

ಯುವತಿ ಸ್ಪೂರ್ತಿ ಮಹೇಶ್ ಪಿಯು ಕಾಲೇಜಿನಲ್ಲಿ ಶೇಕಡ 90 ಅಂಕ ಪಡೆದು ಸಿಇಟಿ ಬರೆದಿದ್ದಾಳೆ ಬಿ ಎಸ್ ಸಿ ಕೃಷಿ ಪದವಿ ಮಾಡುವ ಕನಸು ಹೊಂದಿದ್ದ ಈಕೆ ಇಂತಹ ನೋವಿನ ಸಂದರ್ಭದಲ್ಲೂ ಪರೀಕ್ಷೆ ಬರೆಯುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ.
ಇವಳ ಕುಟುಂಬದ ದುಃಖದ ನಡುವೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಗ್ರಾಮಸ್ಥರಿಂದ ಹಾಗೂ ಸಾರ್ವಜನಿಕರಿಂದ ಪ್ರಶಂಸೆಯ ಮಾತುಗಳ ಮಹಾಪೂರವೇ ಹರಿದು ಬಂದಿದೆ.

ವರದಿ ರಫಿ ರಿಪ್ಪನಪೇಟೆ…