ಜೆಡಿಎಸ್ ನ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಜೆಡಿಎಸ್ ಉಪಾಧ್ಯಕ್ಷ ಕೆ ಬಿ ಪ್ರಸನ್ನ ಕುಮಾರ್ ಚಾಲನೆ ನೀಡಿದರು.18 ನೇ ವಾರ್ಡ್‌ನ ವಿನೋಬನಗರದ ಕಂಚಿಕಾಮಾಕ್ಷಿ ನಗರದಲ್ಲಿರುವ ವಿರಭದ್ರೇಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಯಿತು.

ಶೀಘ್ರದಲ್ಲೇ ಮಹಾನಗರ ಪಾಲಿಕೆ ಚುನಾವಣೆಯ ಸಿದ್ಧತೆ ನಡೆಯುತ್ತಿರುವುದರಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ನಗರದ ಪ್ರತಿ ಬೂತ್ ಮಟ್ಟದಲ್ಲೂ ಸದಸ್ಯತ್ವ ನೋಂದಣಿ ಮಾಡಲಾಗುತ್ತಿದೆ. ಸುಮಾರು 30 ಸಾವಿರ ಹೊಸ ಸದಸ್ಯರನ್ನು ಮಾಡಲು ನಿರ್ಧರಿಸಿದ್ದು ಮನೆ ಮನೆಗೆ ತೆರಳಿ ಅಭಿಯಾನ ನಡೆಸಲು ಪ್ರಾರಂಭಿಸಿದ್ದಾರೆ.

ವರದಿ ಪ್ರಜಾ ಶಕ್ತಿ