ಶಿವಮೊಗ್ಗ: ನಗರದ ಕರ್ನಾಟಕ ಸಂಘದಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಕರ್ನಾಟಕ ಸಂಘ ಶಿವಮೊಗ್ಗದ ಸಹಯೋಗದಲ್ಲಿ ಡಿಸೆಂಬರ್ 24 ಮತ್ತು 25 ರಂದು ಡಾ. ಅಪ್ಪಗೆರೆ ತಿಮ್ಮರಾಜ್ ಅವರ ನೇತೃತ್ವದಲ್ಲಿ ಶಾಂತಾ ಶೆಟ್ಟಿ ಅವರ ಪ್ರಧಾನ ಸಂಚಾಲಕತ್ವದಲ್ಲಿ ಎರಡು ದಿನದ ಜನಪದ ಗೀತ ಗಾಯನ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ, ನಾದಶ್ರೀ ಸಂಗೀತ ಶಾಲೆ, ತರಂಗಿಣಿ ಸಂಗೀತ ಶಾಲೆ, ನಾದಲೀಲೆ ಸಾಂಸ್ಕೃತಿಕ ಟ್ರಸ್ಟ್, ಸ್ವರಾತ್ಮಿಕ ಸಂಗೀತ ವಿದ್ಯಾಲಯ ಹಾಗೂ ನಿನಾದ ಪ್ರತಿಷ್ಠಾನ ಶಿವಮೊಗ್ಗ ಸಹಕಾರ ನೀಡುವರು. ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಲು ಮೊ.ಸಂ. 9986281926, 9844633654 ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *