ಮಂಜುನಾಥ್ ಶೆಟ್ಟಿ…
ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯಮಟ್ಟದ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.ಈ ಸಭೆಯಲ್ಲಿ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರಸನ್ನಗೌಡ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಎಲ್ಲಾ ತಾಲೂಕುಗಳು ಹಾಗೂ ದಾವಣಗೆರೆ ಜಿಲ್ಲೆಯ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿ ಮುಂಬರುವ ಹತ್ತನೇ ವರ್ಷ ವಾರ್ಷಿಕೋತ್ಸವದ ಸಮಾರಂಭ ಹಾಗೂ ಮಲ್ನಾಡು ಉತ್ಸವ ಶಿವಮೊಗ್ಗದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತೀರ್ಥಳ್ಳಿಯ ತಾಲೂಕು ಅಧ್ಯಕ್ಷರಾಗಿ ಅಜಯ್ ಆಯ್ಕೆಯಾದರೂ ಮತ್ತು ತೀರ್ಥಳ್ಳಿಯ ಉಪಾಧ್ಯಕ್ಷರಾಗಿ ಅರುಣ್ ಶೆಟ್ಟಿ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಸಾಹಿಪ್ರಸಾದ್ ಅವರು ಆಯ್ಕೆಯಾದರು.ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರು ದಿನೇಶ್ ಎಸ್ ಎಂ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕೇತ್ ಎನ್ ಹಾಗೂ ಎಲ್ಲಾ ಪದಾಧಿಕಾರಿ ಉಪಸ್ಥಿತರಿದ್ದರು.