ಮಂಜುನಾಥ್ ಶೆಟ್ಟಿ…
ಸೊರಬ: ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ (ರಿ) ಶಿವಮೊಗ್ಗ ಜಿಲ್ಲಾ ಘಟಕದ ವತಿಯೀಂದ ಸೊರಬ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ವಿತರಕ ಶರತ್ ಸ್ವಾಮಿ ನೇತೃತ್ವದಲ್ಲಿ ಕ್ಯಾಲೆಂಡರ್ ಗಳನ್ನು ಬಿಡುಗಡೆಗೊಳಿಸಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ತೋಟಪ್ಪ ಜಿ.ಎಂ ಮಾತನಾಡಿ, ಪತ್ರಿಕಾ ವಿತರಕರು ಪತ್ರಿಕಾ ರಂಗದ ಅವಿಭಾಗ್ಯ ಅಂಗವಾಗಿದ್ದು, ಪತ್ರಿಕೆ ಮುದ್ರಣದ ಶ್ರಮಕ್ಕೆ ಪ್ರತಿಫಲ ಸಿಗಲು ವಿತರಕರ ಪಾತ್ರ ಮಹತ್ತರವಾಗಿದೆ ಎಂದರು.
ಮಾಜಿ ಅಧ್ಯಕ್ಷ ಬಣ್ಣದಬಾಬು ಮಾತನಾಡಿ, ಜನರಿಗೆ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೇ ಮನೆಮನೆಗೆ ಪತ್ರಿಕೆ ಮುಟ್ಟಿಸುವ ಕಾರ್ಯ ಅನನ್ಯ ಎಂದರು. ಪತ್ರಿಕಾ ವಿತರಕ ರಘುನಾಥ ಬಾಪಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶರತ್ ಸ್ವಾಮಿ, ರಾಘವೇಂದ್ರ ಬಾಪಟ್, ನೋಪಿಶಂಕರ, ರವಿ ಕಲ್ಲಂಬಿ, ಚಂದ್ರಪ್ಪ, ಹೆಚ್.ಕೆ.ಬಿ ಸ್ವಾಮಿ,ಜೆ.ಎಸ್ ಚಿದಾನಂದಗೌಡ ಮತ್ತಿತರರಿದ್ದರು.