ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲೆಯ ಮಂಡಘಟ್ಟದ ಶಿವಕುಮಾರ್ ಎಸ್. ಎಂಬುವವರು ಬೆಂಗಳೂರು ಫ್ಲಿಪ್‌ಕಾರ್ಟ್ ಮುಖ್ಯ ವ್ಯವಸ್ಥಾಪಕರು ಹಾಗೂ ಉತ್ತರ ಪ್ರದೇಶದ ಮುಜಫರ್‌ನಗರದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ಇವರುಗಳ ವಿರುದ್ಧ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ಪಡೆದಿರುತ್ತಾರೆ ಎಂದು ನೀಡಿದ ದೂರನ್ನು ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಎದುರುದಾರರಿಂದ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಶೇ. 76 ರಷ್ಟು ರಿಯಾಯಿತಿದರದಲ್ಲಿ ರೂ. 540/- ಹಾಗೂ ಶಿಪ್ಪಿಂಗ್ ಚಾರ್ಚ್ ರೂ. 41/- ಸೇರಿ ರೂ. 540/- ಗಳನ್ನು ಪಾವತಿಸಿ ಖರೀದಿಸಿರುತ್ತಾರೆ. ಆದರೆ ಪರೀಶೀಲಿದಾಗ ಎಂ.ಆರ್.ಪಿ. ಬೆಲೆಯನ್ನು ಅಳಿಸಿ, ಬಿಳಿ ಕಾಗದವನ್ನು ಅಂಟಿಸಿರುತ್ತಾರೆ. ಅದರ ನಿಜವಾದ ಬೆಲೆ 324/- ರೂ.ಗಳಿದ್ದು ರೂ. 216/-ಗಳ ಹೆಚ್ಚಿನ ಮೊತ್ತ ಪಡೆದಿದ್ದು, ಈ ಕುರಿತು ಎದುರುದಾರರಿಗೆ ಹೆಚ್ಚಿನ ಹಣವನ್ನು ಮರುಪಾವತಿಸುವಂತೆ ಲೀಗಲ್ ನೋಟೀಸ್ ನೀಡಿರುತ್ತಾರೆ. ಆದರೆ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.