ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಫೆಬ್ರವರಿ 9 ರಿಂದ 13ರ ವರೆಗೆ ಜಿಲ್ಲಾದ್ಯಂತ 5 ದಿನಗಳ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಹಣಕಾಸು ಸೇವೆಗಳ ಇಲಾಖೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಜಿಲ್ಲಾ ಪಂಚಾಯಿತಿಯ ನಿರ್ದೇಶನದೊಂದಿಗೆ ಶಿವಮೊಗ್ಗ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಫೆಬ್ರವರಿ 9 ರಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ ಎನ್ ಅವರು ಸಪ್ತಾಹದ ಪೋಸ್ಟರ ಗಳನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಜಿಲ್ಲಾಧ್ಯಂತ 368 ಬ್ಯಾಂಕ್ ಶಾಖೆಗಳಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕೆ ವೈ ಸಿ ( ನೋ ಯುವರ್ ಕಸ್ಟಮರ್ ) ನಿಮ್ಮ ಗ್ರಾಹಕರನ್ನು ತಿಳಿಯಿರಿ ಎನ್ನುವುದು ಈ ಆರ್ಥಿಕ ಸಪ್ತಹದ ವಿಷಯವಾಗಿದ್ದು ಪ್ರಾಮುಖ್ಯತೆ ಹಾಗೂ ಓವಿಡಿ ಅಧಿಕೃತವಾಗಿ ಮಾನ್ಯವಾದ ದಾಖಲೆಗಳ ಬಗ್ಗೆ ವಿಚಾರಗಳು ಮರು ಕೆ ವೈಸಿ,ವಿಡಿಯೋ ಕೆವೈಸಿ, ಸೆಂಟ್ರಲ್ ಕೆ ವೈ ಸಿ, ಆಧಾರ್ ಓಟಿಪಿ ಹೀಗೆ ಹಲವಾರು ಬ್ಯಾಂಕಿನ ವಿಷಯಗಳ ಬಗ್ಗೆ ಜಾಗೃತಿಯ ಪ್ರಚಾರ ಮಾಡಲಾಗುವುದು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ LDM ಹನುಮಂತಪ್ಪ ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಬ್ಯಾಂಕಿನ ಕ್ಷೇತ್ರಿಯ ಕಾರ್ಯಾಲಯದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *