ಮಂಜುನಾಥ್ ಶೆಟ್ಟಿ…

ಆಗುಂಬೆ ಪೊಲೀಸ್ ಠಾಣೆಗೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ರವರು ಭೇಟಿ ನೀಡಿ ಪೊಲೀಸ್ ಗೌರವ ವಂದನೆಗಳನ್ನು ಸ್ವೀಕರಿಸಿದರು.ನಂತರ ಪೊಲೀಸ್ ಠಾಣಾ ಸ್ವಚ್ಚತೆ, ಕಡತಗಳು ಮತ್ತು ಸ್ವತ್ತಿನ ನಿರ್ವಹಣೆಯ ಬಗ್ಗೆ ಪರಿಶೀಲಿಸಿ, ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಕುಂದುಕೊರತೆಗಳನ್ನು ಆಲಿಸಿದರು.

ನಂತರ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡ ಠಾಣಾ ಆವರಣದಲ್ಲಿದ್ದ ವಾಹನಗಳ ಶೀಘ್ರ ವಿಲೇವಾರಿ ಹಾಗೂ ಅಪರಾಧ ಪ್ರಕರಣಗಳ ವಿಲೇವಾರಿ ಮಾಡುವ ಕುರಿತು ಮತ್ತು ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.ಅವರುಗಳ ಕುಂದು ಕೊರತೆಯನ್ನು ಆಲಿಸಲಾಯಿತು.

ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್  ಶಿವನ ಗೌಡರ ಮತ್ತು ಸಿಬ್ಬಂದಿಗಳು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *