ಶಿವಮೊಗ್ಗದ ವಿಶೇಷ ಭೂಸ್ವಾಧೀನ ಅಧಿಕಾರಿ ಸಿದ್ದಲಿಂಗ ರೆಡ್ಡಿಯವರನ್ನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೊದಲು SLO ಜೊತೆ ನಾಡಕಚೇರಿಯ ಗ್ರಾಮ ಸಹಾಯಕ ರಾಜೇಶ್ ಸಹ ಈ ಬಲೆಗೆ ಬುದ್ದು SLO ಹೆಸರು ಹೇಳಿದ್ದಾನೆ.

ತಮ್ಮ ಕಾರು ಚಾಲಕ ಕೇಶವ ಎಂಬಾತರ ಬಿಲ್ ಸೆಟ್ಲು ಮಾಡುವ ಉವ ಆರೋಪದ ಅಡಿಯಲ್ಲಿ ಸಿದ್ದಲಗ ರೆಡ್ಡಿಯವರನ್ನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಿಸಿ ಸೆಲ್ವಮಣಿ ಮತ್ತು ಡಿಸಿ ಗುರುದತ್ತ ಹೆಗಡೆಯವರ ಕಾಲದಲ್ಲಿ ಶಿವಮೊಗ್ಗದ ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು.

ಇತ್ತೀಚಗಷ್ಟೆ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಶಿವಮೊಗ್ಗಕ್ಕೆ ವರ್ಗ ಕೂಡ ಆಗಿದ್ದರು. ಈಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.

ಎಡಿಸಿಯವರಿಗೆ ಓತಿಘಟ್ಟದ ನಿವಾಸಿ ಕೇಶವಮೂರ್ತಿ.ವಿ.ಬಿನ್ ವಾಸಪ್ಪ, ಕೆಎ-14-ಸಿ-6521 ರ ಮಾರುತಿ ಎರಿಟಿಗಾ ಕಾರನ್ನು ಶಿವಮೊಗ್ಗ ವಿಶೇಷ ಭೂ ಸ್ವಾಧೀನಾಧಿಕಾರಿ-ಎನ್.ಹೆಚ್-206 ಕಛೇರಿಗೆ ಸುಮಾರು 2 ವರ್ಷಗಳ ಹಿಂದೆ ಬಾಡಿಗೆಗೆ ಬಿಟ್ಟಿದ್ದು, ಪ್ರತಿ ತಿಂಗಳು ಕಾರಿನ ಮಾಸಿಕ ಬಾಡಿಗೆ ಮೊತ್ತವನ್ನು ಪಿರ್ಯಾದಿಗೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಛೇರಿಯಿಂದ ಚೆಕ್ ಮೂಲಕ ನೀಡುತ್ತಿದ್ದರು.

ಆದರೆ 2025 ನೇ ನವಂಬರ್ ತಿಂಗಳ ಬಾಡಿಗೆ ಹಣವನ್ನು ನೀಡಲು ಶಿವಮೊಗ್ಗ ವಿಶೇಷ ಭೂ ಸ್ವಾಧೀನಾಧಿಕಾರಿಯಾದ ಶ್ರೀ ಸಿದ್ದಲಿಂಗ ರೆಡ್ಡಿ. ಕೆ.ಎ.ಎಸ್ ರವರು ದೂರುದಾರರ ಬಳಿ 40,000/-ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ದೂರುದಾರರ ಸದರಿ ಅಧಿಕಾರಿ ವಿರುದ್ಧ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಪ್ರಕಾರ ಪ್ರಕರಣವನ್ನು ನೊಂದಾಯಿಸಿರುತ್ತದೆ.

ದಿನಾಂಕ:14-02-2026 ರಂದು ಸಂಜೆ ಪ್ರಕರಣದಲ್ಲಿ ಅಪಾಧಿತ ಎ2 ರಾಜೇಶ್ ಬಿನ್ ಲಕ್ಷ್ಮಣ, ಗ್ರಾಮ ಸಹಾಯಕ, ಹೊಳಲೂರು ನಾಡಕಛೇರಿ, ಶಿವಮೊಗ್ಗ ತಾಲ್ಲೂಕ್ ರವರು ಆಪಾದಿತ ಅಧಿಕಾರಿ ಎl ಸಿದ್ದಲಿಂಗರೆಡ್ಡಿ. ವಿಶೇಷ ಭೂ ಸ್ವಾಧೀನ ಅಧಿಕಾರಿ, ಎನ್.ಹೆಚ್-206 ರವರ ಸೂಚನೆ ಮೇರೆಗೆ ದೂರುದಾರರಿಂದ 40,000/- ಹಣವನ್ನು ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಪಡೆದುಕೊಂಡಿದ್ದು ಈ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಅಪಾಧಿತ-01 ಸಿದ್ದಲಿಂಗರೆಡ್ಡಿ ಮತ್ತು ಆಪಾದಿತ-02 ರಾಜೇಶ್ ರವರನ್ನು ವಶಕ್ಕೆ ಪಡೆದು ತನಿಖಾಧಿಕಾರಿಯಾದ ಶ್ರೀ.ಬಿ.ಪಿ.ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಕೈಗೊಂಡಿರುತ್ತಾರೆ.

ಕಾರ್ಯಚರಣೆಯನ್ನು ಲೋಕಾಯುಕ್ತ ಎಸ್ ಪಿ ಎಮ್.ಎಸ್.ಕೌಲಾಪೂರೆ ರವರ ಮಾರ್ಗದರ್ಶನದಲ್ಲಿ ಬಿ.ಪಿ.ಚಂದ್ರಶೇಖರ್.ಡಿ.ಎಸ್.ಪಿ ಕ.ಲೋ ಶಿವಮೊಗ್ಗ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಘಟಕದ ಪೊಲೀಸ್ ನಿರೀಕ್ಷಕರವರುಗಳಾದ ಶ್ರೀ.ಕೆ.ಪಿ.ರುದ್ರೇಶ್, ಶ್ರೀ.ಗುರುರಾಜ್ ಮೈಲಾರ್, ಶ್ರೀ ವೀರಬಸಪ್ಪ ಎಲ್ ಕುಸಲಾಪುರ ಹಾಗೂ ಸಿಬ್ಬಂದಿಯವರಾದ ಶ್ರೀ.ಯೋಗೇಶ್.ಜಿ.ಸಿ, ಸಿ.ಹೆಚ್.ಸಿ ಶ್ರೀ ಟೀಕಪ್ಪ, ಸಿ.ಹೆಚ್.ಸಿ, ಶ್ರೀ.ಸುರೇಂದ್ರ.ಹೆಚ್.ಸಿ ಸಿ.ಹೆಚ್.ಸಿ ಶ್ರೀ.ಬಿ.ಟಿ.ಚನ್ನೇಶ್.ಸಿ.ಪಿ.ಸಿ ಶ್ರೀ.ದೇವರಾಜ್, ಸಿ.ಪಿ.ಸಿ. ಶ್ರೀ.ಅರುಣ್ ಕುಮಾರ್.ಯು.ಬಿ. ಸಿ.ಪಿ.ಸಿ. ಶ್ರೀ.ಪ್ರಕಾಶ್ ಬಾರಿಮರದ್ ಸಿ.ಪಿ.ಸಿ ಶ್ರೀ.ಆದರ್ಶ್ ಸಿ.ಪಿ.ಸಿ ಶ್ರೀಮತಿ ಚಂದ್ರಿಬಾಯಿ ಮ.ಪಿ.ಸಿ ಶ್ರೀ.ಪ್ರದೀಪ್.ಎ.ಹೆಚ್.ಸಿ. ಶ್ರೀ.ಗೋಪಿ. ಎ.ಪಿ.ಸಿ ಶ್ರೀ.ಚೇತನ್ ಎ.ಪಿ.ಸಿ. ಶ್ರೀ.ಆನಂದ ಎ.ಪಿ.ಸಿ ರವರು ಭಾಗಿಯಾಗಿದ್ದರು.

ಮಂಜುನಾಥ್ ಶೆಟ್ಟಿ…

Leave a Reply

Your email address will not be published. Required fields are marked *