ಮಂಜುನಾಥ್ ಶೆಟ್ಟಿ…
ಮಾಜಿ ಉಪ ಮುಖ್ಯಮಂತ್ರಿ ಶ್ರೀ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಅವರನ್ನು ಬೇಟಿ ಮಾಡಿದರು.
ಗೋವಿಂದಾಪುರ ಆಶ್ರಯ ಮನೆಗಳ ಹಂಚಿಕೆ ಪ್ರಗತಿಯ ಕುರಿತಾಗಿ ಚರ್ಚಿಸಲಾಯಿತು.ಮನೆಗಳ ನಿರ್ಮಾಣ, ಪೂರ್ಣಗೊಂಡಿರುವ ಮನೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಆಯುಕ್ತರೊಡನೆ ಚರ್ಚಿಸಲಾಯಿತು.ಸ್ಥಳದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪನವರಿಗೆ ಕರೆ ಮಾಡಿ ಆಶ್ರಯ ಮನೆಗಳ ವಿಚಾರವಾದ ಸಮಸ್ಯೆಗಳ ಬಗ್ಗೆ ಮಾತನಾಡಲಾಯಿತು.
ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳನ್ನು ಫಲಾನುಬವಿಗಳಿಗೆ ಹಂಚಿಕೆ, ಇ-ಆಸ್ತಿ ನೊಂದಣಿಯಲ್ಲಿ ಆಗುತ್ತಿರುವ ಗೊಂದಲ ನಿವಾರಣೆ, ರೋಟರಿ ಚಿತಾಗಾರದ ನಿರ್ವಹಣೆ, ನಗರದ ಕೆಲವು ಬಡಾವಣೆಗಳ ರಸ್ತೆ, ಒಳಚರಂಡಿ, ಬೀದಿ ದೀಪ, ಸಾರ್ವಜನಿಕ ಪಾರ್ಕ್‌ಗಳ ನಿರ್ವಹಣೆ ಇತರ ಸಮಸ್ಯೆಗಳ ಕುರಿತು ತಿಳಿಸಿದರು.
ವಿಶೇಷವಾಗಿ ಜಿಲ್ಲಾಧಿಕಾರಿ ಕಛೇರಿ ಎದುರಿನ ಆಟದ ಮೈದಾನದ ವಸ್ತುಸ್ಥಿತಿ ವರದಿಯ ಕುರಿತಾಗಿ ಮಾಹಿತಿ ಪಡೆಯಲಾಯಿತು. ಆಯುಕ್ತರು ವಿಷಯದ ಕುರಿತು ಸೂಕ್ತವಾಗಿ ಸ್ಪಂದಿಸಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಆಯಾ ಸಮಸ್ಯೆಗಳಿಗೆ ಸ್ಪಂದಿಸಲು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್, ಇ.ವಿಶ್ವಾಸ್, ಶ್ರೀಕಾಂತ್, ಶಿವಾಜಿ, ಬಾಲು, ಜಾದವ್ ಮುಂತಾದವರು ಇದ್ದರು.