ಮಂಜುನಾಥ್ ಶೆಟ್ಟಿ…

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಮಾನಸಿಕ ಆರೋಗ್ಯದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಿನ್ಸಿಪಾಲ್ ಗುರುರಾಜ್ (ಆದಿಚುಂಚನಗಿರಿ ಬಿವಿ ಕಾಲೇಜು) ಹಾಗೂ ರೋಹನ್ ಸಿಂಗ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರೋಹನ್ ಸಿಂಗ್ ಅವರು ಮನಸ್ಸಿನ ಅಸಮತೋಲನವು ಮನುಷ್ಯನ ಜೀವನದಲ್ಲಿ ಬೀರುವ ಪರಿಣಾಮಗಳ ಕುರಿತು ವಿವರಿಸಿದರು. ಮಾನಸಿಕ ಒತ್ತಡವು ಕುಟುಂಬದ ಸಮಸ್ಯೆಗಳು, ಉದ್ಯೋಗದ ಒತ್ತಡ, ಸ್ಪರ್ಧಾತ್ಮಕ ಜೀವನಶೈಲಿ, ಸಾಮಾಜಿಕ ಮಾಧ್ಯಮಗಳ ಪ್ರಭಾವ ಹಾಗೂ ಅತಿಯಾದ ನಿರೀಕ್ಷೆಗಳಂತಹ ಕಾರಣಗಳಿಂದ ಉಂಟಾಗುತ್ತದೆ ಎಂದು ಹೇಳಿದರು.

ಒತ್ತಡದ ಸಂದರ್ಭಗಳಲ್ಲಿ ದೇಹದಲ್ಲಿ ಹಾರ್ಮೋನ್‌ಗಳ ವೈಪರೀತ್ಯ ಉಂಟಾಗಿ, ವಿಶೇಷವಾಗಿ ಕಾರ್ಟಿಸೋಲ್ ಮತ್ತು ಅಡ್ರೆನಲಿನ್ ಹಾರ್ಮೋನ್‌ಗಳ ಹೆಚ್ಚಳದಿಂದ ಕೋಪ, ಆತಂಕ, ಭಯ, ನಿರಾಶೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದರು. ಈ ಸ್ಥಿತಿ ಮುಂದುವರಿದರೆ ಡಿಪ್ರೆಶನ್ ಹಾಗೂ ಆಂಗ್ಸೈಟಿ ಸಮಸ್ಯೆಗಳಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಪ್ರಾಂಶುಪಾಲರದ ಗುರುರಾಜ್ ಮಾತನಾಡಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಸಮಾನ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು. ವಿಶೇಷವಾಗಿ ಇಂದಿನ ಕಾಲದಲ್ಲಿ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದರು.

ಹೆಚ್ಚು ಸಮಯ ಮೊಬೈಲ್ ಬಳಕೆ ಮಾಡುವುದರಿಂದ ಏಕಾಗ್ರತೆ ಕುಗ್ಗುವುದು, ನಿದ್ರಾಭಂಗ, ಒಂಟಿತನದ ಪ್ರವೃತ್ತಿ, ಕೋಪ ಹಾಗೂ ಆತಂಕ ಹೆಚ್ಚಾಗುವುದು ಕಂಡುಬರುತ್ತದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳ ಅತಿಯಾದ ಪ್ರಭಾವದಿಂದ ಮಕ್ಕಳಲ್ಲಿ ಹೋಲಿಕೆ ಮನೋಭಾವ, ಆತ್ಮವಿಶ್ವಾಸ ಕುಗ್ಗುವುದು ಹಾಗೂ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಪೋಷಕರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಹಾಗೂ ಕ್ರೀಡೆ, ಓದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಆನ್ಯಕ್ಲಬ್ ಅಧ್ಯಕ್ಷರಾದ ರಾಜೇಶ್ರಿ ಬಸವರಾಜ್, ಮಥುರಾ ದನಂಜಯಂ, ದೀಪಾ ಶೆಟ್ಟಿ, ರಾಜೇಶ್ವರಿ ಸಿಂಗ್, ರಮೇಶ್ ಎನ್., ಸಂತೋಷ್ ಬಿ.ಎ., ಅರುಣ್ ಕುಮಾರ್, ಆನಂದ್, ವಲಯ ಸೇನಾನಿ ಕಿರಣ್ ಕುಮಾರ್ ಜಿ, ರವಿಕೇ ಧರ್ಮೇಂದ್ರ ಸಿಂಗ್ ಹಾಗೂ ರಾಮನಾಥ ಗಿರಿಮಾಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *