ಶಿವಮೊಗ್ಗ ತಾಲ್ಲೂಕು ತೋಟಗಾರಿಕೆ ಇಲಾಖೆಯ ವತಿಯಿಂದ 2025-26 ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ‘ತರಕಾರಿ ಬೀಜಗಳ ಕಿಟ್’ ಗಳನ್ನು ರೈತರಿಗೆ ವಿತರಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಸಲು ಫೆ.23 ಕಡೆಯ ದಿನವಾಗಿದ್ದು ರೈತರು ತಮ್ಮ ಜಮೀನಿಗೆ ಸಂಬAಧಪಟ್ಟ ಪ್ರಸ್ತುತ ವರ್ಷದ ಪಹಣಿ/ಆರ್‌ಟಿಸಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.


ಆಸಕ್ತ ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಗಾಂಧಿಪಾರ್ಕ್, ಶಿವಮೊಗ್ಗ ಇವರನ್ನು ಅಥವಾ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದು ಸಲ್ಲಿಸಬಹುದು ಎಂದು ಶಿವಮೊಗ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *