ಮಂಜುನಾಥ್ ಶೆಟ್ಟಿ…


ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆಯು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾದ ವಿಶಾಲ ಪ್ರದೇಶವನ್ನೊಳಗೊಂಡ ಪ್ರತಿಷ್ಠಿತ ಬಡಾವಣೆಯಾಗಿದ್ದು, ಸುಶಿಕ್ಷಿತರು ಹೆಚ್ಚಾಗಿ ವಾಸಿಸುವ ಬಡಾವಣೆಯಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆಗೆ ಹಂಸ್ತಾಂತರವಾಗಿದ್ದು, ನಿರೀಕ್ಷಿತ ಮಟ್ಟದ ಅಭಿವೃದ್ಧಿಯಾಗಿರುವುದಿಲ್ಲ. ಆದ್ದರಿಂದ ತಾವುಗಳು ನಿವಾಸಿಗಳ ಬಹುದಿನದ ಬೇಡಿಕೆಗೆ ಪೂರ್ವಕವಾಗಿ ಸ್ಪಂದಿಸಿ ಆದ್ಯತೆ ಮೇರೆಗೆ ಈ ಎರಡು ಅವಳಿ ಬಡಾವಣೆಯ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದೆ.

ಪ್ರಮುಖ ಬೇಡಿಕೆಗಳು…

  1. ಗೋಪಾಲಗೌಡ ಬಡಾವಣೆಯ ದೇವಂಗಿ ಹೈಲೆಟ್ಸ್ ಅಪಾರ್ಟಮೆಂಟ್ ಪಕ್ಕದ ರಸ್ತೆ ಡಾಂಬರೀಕರಣ.
  2. ಬಂಟರ ಭವನ ಹತ್ತಿರದ ರಾಜಕಾಲುವೆ ರಸ್ತೆಯು ಕುಸಿದು ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಸದರಿ ರಸ್ತೆ ಕಾಮಗಾರಿ ಕೈಗೊಳ್ಳುವುದು.
  3. ಎ ಬ್ಲಾಕ್ನ ಪುರಂಧರ ಪಾರ್ಕ್ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸುವುದು.
  4. ಗುಡ್ಲಕ್ ಸರ್ಕಲ್ನ ಎ ಬ್ಲಾಕ್ಗೆ ಹೊಂದಿಕೊಂಡಿರುವ ಮೊದಲನೆ ರಸ್ತೆ ಕಾಮಗಾರಿಗೆ ಆದ್ಯತೆ ನೀಡುವುದು.
  5. ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸುವುದು.
  6. ಬೀದಿ ದೀಪಗಳ ನಿರ್ವಹಣೆ ಇಲ್ಲದೆ ದೀಪಗಳು ಹಾಳಾಗಿದ್ದು, ತುರ್ತು ಕ್ರಮ ವಹಿಸುವುದು.
  7. ಎರಡು ಬಡಾವಣೆಗಳು ವಿಶಾಲ ಪ್ರದೇಶ ಹೊಂದಿದ್ದು, ಪೌರಕಾರ್ಮಿಕರ ಕೊರತೆಯಿಂದ ಸ್ವಚ್ಚತೆ ಕಷ್ಟಸಾಧ್ಯವಾಗಿರುವುದರಿಂದ ಹೆಚ್ಚುವರಿ ಕಾರ್ಮಿಕರನ್ನು ನೇಮಿಸುವುದು.
  8. ರಾಜಕಾಲುವೆ ಅವೈಜ್ಞಾನಿಕವಾಗಿದ್ದು, ಮೆಳೆಗಾಲದಲ್ಲಿ A B C ಬ್ಲಾಕ್ಗಳಿಗೆ ನೀರು ನುಗ್ಗುವುದರಿಂದ ನಿವಾಸಿಗಳು ಆತಂಕ ಪಡುವಂತಾಗಿದೆ. ವೈಜ್ಞಾನಿಕವಾಗಿ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದು.
  9. ಸ್ವಾಮಿ ವಿವೇಕಾನಂದ ಬಡಾವಣೆಯ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಡಾಂಬರೀಕರಣ ಹಾಗೂ ಬಾಕ್ಸ್ ಡ್ರೈನೇಜ್ ಕಾಮಗಾರಿ ಕೈಗೊಳ್ಳುವುದು ಮತ್ತು ರಸ್ತೆಗಳಿಗೆ ನಾಮ ಫಲಕ ಅಳವಡಿಸುವುದು.
  10. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಜನನ ನಿಯಂತ್ರಣಕ್ಕೆ ಆದ್ಯತೆ ನೀಡುವುದು ಎಂದು ಮನವಿಯಲ್ಲಿ ತಿಳಿಸಿದರು.

  11. ವಂದನೆಗಳೊಂದಿಗೆ.
    ಜಿ.ಡಿ. ಮಂಜುನಾಥ್, ಟಿ. ಡಿ. ಗೀತೇಂದ್ರ ಗೌಡ, ಆರ್, ರಾಜಶೇಖರ್, ಜಿ. ಎಸ್. ಶಿವಕುಮಾರ್, ರವಿ. ಬಿ .ಆರ್ ವಿಜಯಕುಮಾರ್ ಎಸ್ ಪ್ರಜ್ವಲ್ ಶೆಟ್ಟಿ ಹೆಚ್. ಕೆ ಬಸವರಾಜ್, ರಾಮಲಿಂಗಪ್ಪ, ರಾಜು ತುಮಿಣಕಟ್ಟೆ ,
    ಹರೀಶ್,
    ಶೃತಿ A L,
    ಗುರುಪ್ರಸಾದ್,
    ಹಾಲೇಶ್, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *