ಮಂಜುನಾಥ್ ಶೆಟ್ಟಿ…

ದೇಶದ ಮಾನವನ್ನು ಹರಾಜಿಗಿಟ್ಟಿರುವ ಕಾಂಪ್ರಮೈಸ್ PM ನರೇಂದ್ರಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ವಜಾ ಗೊಳಿಸಲು ಯುವ ಕಾಂಗ್ರೆಸ್ ಅಗ್ರಹ

ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮರ್ಯಾದೆಯನ್ನು ಕಳೆಯುತ್ತಿರುವ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾ ಗೊಳಿಸಲು ಆಗ್ರಹಿಸಿ ನಗರ ಯುವ ಕಾಂಗ್ರೆಸ್ ವತಿಯಿಂದ ಶಿವಪ್ಪ ನಾಯಕ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.
ಪ್ರಸನ್ನಕುಮಾರ್ ಎಪ್ಸ್ಟೀನ್ ಫೈಲ್ಸ್ ಬಹಿರಂಗಪಡಿಸಿರುವ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ದೊರೆ ಭೇಟಿ ಸಂದರ್ಭದಲ್ಲಿ 2017ರ ಜುಲೈ 9ರಂದು ತಮಗೆ ಬೆಂಬಲ ನೀಡುವಂತೆ ವಿದೇಶಿ ಪ್ರಧಾನಿಗಳೆದುರು ನೃತ್ಯ ಮಾಡುವ ಮೂಲಕ ದೇಶದ ಮಾನ ಹರಾಜಿಗಿಟ್ಟಿರುವುದು ಬಹಿರಂಗವಾಗಿದೆ. ಇದು ವಿಶ್ವದಾದ್ಯಂತ ಚರ್ಚೆಯಾಗಿ ದೇಶದ ಮರ್ಯಾದೆ ಹೋಗಿದೆ. ದೇಶದ ಮಾನ ಹರಾಜಿಗಿಟ್ಟಿರುವ ಕಾಂಪ್ರಮೈಸ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೂಡಲೇ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಮೂಲಕ ರಾಷ್ಟ್ರಪತಿಗಳನ್ನು ಒತ್ತಾಯಿಸುತ್ತಿದೆ.

ಇದೇ ಸಂದರ್ಭದಲ್ಲಿ ಈ ಪ್ರತಿಭಟನೆ ಉದ್ದೇಶಕ್ಕೆ ಮಾತನಾಡಿದ KPCC ಪ್ರಧಾನ ಕಾರ್ಯದರ್ಶಿಗಳಾದ ಎನ್. ರಮೇಶ್
ಅಮೇರಿಕಾದ ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಯಾವುದೇ ಸುಂಕವಿಲ್ಲದೇ 0% ಸುಂಕದಲ್ಲಿ ನೇರವಾಗಿ ಭಾರತದ ಮಾರುಕಟ್ಟೆಗೆ ಅಮೇರಿಕಾದ ಉತ್ಪನ್ನಗಳು ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲೇ ಸಾಲದ ಸುಳಿಯಲ್ಲಿ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಭಾರತದ ಬಡ ರೈತರು ಅಮೇರಿಕದಂತಹ ಅತ್ಯಂತ ಶ್ರೀಮಂತ ಕಾರ್ಪೋರೇಟ್ ಕೃಷಿ ಉದ್ಯಮಕ್ಕೆ ನಮ್ಮ ದೇಶದ ಬಡರೈತ ಪೈಪೋಟಿ ಕೊಡಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ನಿರ್ಧಾರ ದೇಶದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಕೊಂಡೊಯ್ಯಲಿದೆ ಇಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷರಾದ ರಮೇಶ ಹೆಗಡೆ ಕಾಂಪ್ರಮೈಸ್ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಸುಳ್ಳು ಹೇಳಿಕೊಂಡೇ ಪ್ರಧಾನಿ ಹುದ್ದೆಗೇರಿದವರು. ಅವರು ಅಧಿಕಾರಕ್ಕೆ ಬಂದಂದಿನಿಂದಲೂ ಒಂದಲ್ಲಾ ಒಂದುರೀತಿ ಸುಳ್ಳು ಹೇಳಿಕೊಂಡೇ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಎಂದು ಹೇಳಿಕೊಂಡು ಬರುತ್ತಿರುವ ಪ್ರಧಾನಿ ಮೇಕ್ ಇನ್ ಇಂಡಿಯಾಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಫ್ಯಾಕ್ಟ್ ಶೃಂಗಸಭೆಯಲ್ಲಿ ವಿದೇಶಿ ಆವಿಷ್ಕಾರವನ್ನು ಸ್ವದೇಶಿ ಸೆಂಟರ್ ಆಫ್ ಎಕ್ಸಲೆನ್ಸ್‍ನಲ್ಲಿ ಓರಿಯನ್ ಎಂಬ ಹೆಸರಿನ ರೋಬೋಟ್ ನಾಯಿಯನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದು ಹೇಳಲಾಗಿದೆ. ಆದರೆ, ಇದು ಮೂಲದಿಂದ ಚೀನಾದ ಅವಿಷ್ಕಾರ ಎಂದು ತಜ್ಞರು ಪತ್ತೆ ಹಚ್ಚಿದ್ದಾರೆ. ಅದೇ ರೀತಿ ದಕ್ಷಿಣ ಕೊರಿಯಾದ ಸಾಕರ್ ಡ್ರೋಣ್ ಅನ್ನು ತಮ್ಮ ಕ್ಯಾಂಪಸ್‍ನಲ್ಲಿ ತಯಾರಿಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಈ ರೀತಿ ಸುಳ್ಳು ಹೇಳುವ ಮೂಲಕ ದೇಶದ ಮಾನವನ್ನು ಹರಾಜಿಗೆ ಹಾಕಿರುವ ಉತ್ತರ ಪ್ರದೇಶದ ಗಲ್ಗೋಟಿಯಾ ವಿವಿಗೂ ಪ್ರಧಾನಿ ನರೇಂದ್ರ ಮೋದಿಯವರಿಗೂ ಗಾಢವಾದ ನಂಟಿದೆ ಎನ್ನುವುದು ಜಗಜ್ಜಾಹೀರಾಗಿದೆ.

ಇದೇ ಸಂದರ್ಭದಲ್ಲಿ ಜವಳಿ ನಿಗಮದ ಅಧ್ಯಕ್ಷರಾದ ಚೇತನ್ ಗೌಡರವರು ಮಾತನಾಡಿ ಈ ಹಿಂದೆ ಕೊರೋನಾ ಸಂದರ್ಭದಲ್ಲಿ ತಟ್ಟೆ ಲೋಟ, ಗಂಟೆ ಬಡಿಯುವ ಮೂಲಕ ಕೊರೋನಾ ವೈರಸ್ ನಿಯಂತ್ರಿಸಬಹುದು ಎಂದು ಹೇಳುವ ಮೂಲಕ ಪ್ರಧಾನಿ ನಗೆಪಾಟಲಿಗೆ ಗುರಿಯಾಗಿದ್ದರು. ಆಗ ಇದೇ ವಿವಿಯ ತಟ್ಟೆ-ಗಂಟೆ ಬಡಿಯುವ ಸಂದರ್ಭದಲ್ಲಿ ಉದ್ಭವವಾಗುವ ಶಬ್ದದ ಅಲೆಗಳು ಅದ್ಭುತ ತರಂಗಾಂತರ ಹೊಂದಿದ್ದು, ಕೊರೋನಾ ವೈರಸ್ ನಾಶಕ್ಕೆ ಕಾರಣವಾಗುತ್ತದೆ ಎಂಬ ಸುಳ್ಳು ಸುದ್ದಿ ಹರಿಬಿಟ್ಟಿದ್ದು ಸಹ ಇದೇ ಗಲ್ಗೋಟಿಯಾ ವಿವಿಯ ರಿಸರ್ಚ್ ಸ್ಕಾಲರ್ ಧರ್ಮೇಂದ್ರಕುಮಾರ್. ಇವೆಲ್ಲವೂ ನರೇಂದ್ರ ಮೋದಿ ತಾನು ಮಾತ್ರವಲ್ಲ ತಮ್ಮ ಬಳಗವೇ ಸುಳ್ಳು ಎಂದು ಸಾಬೀತು ಪಡಿಸಿ ದೇಶದ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜಿಗಿಟ್ಟಿದ್ದಾರೆ.


ಇಂತಹ ಪ್ರಧಾನಿಯಿಂದ ಒಂದು ಕಡೆ ದೇಶದ ಮಾನ ಹರಾಜಾಗುತ್ತಿದ್ದರೆ ಮತ್ತೊಂದೆಡೆ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದಾಗಿ ಇಡೀ ದೇಶ ಸಂಕಷ್ಟಕ್ಕೀಡಾಗುತ್ತಿದೆ. ಇತ್ತೀಚೆಗೆ ಹೊರಬಂದ ಎಪ್ಸ್ಟೀನ್ ಸಂಬಂಧಿತ ದಾಖಲೆಗಳು ಪ್ರಧಾನಿ ನರೇಂದ್ರಮೋದಿಯವರು ದೇಶದ ಮಾನ ಹರಾಜಿಗಿಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಅಧಿಕಾರ ಉಳಿಸಿಕೊಳ್ಳಲು ಈ ಮಟ್ಟಕ್ಕೆ ಯಾವ ಪ್ರಧಾನಿಯೂ ಇಳಿದಿರುವ ಉದಾಹರಣೆ ಇಲ್ಲ. ಆದ್ದರಿಂದ ಕೂಡಲೇ ಕಾಂಪ್ರಮೈಸ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತಿದೆ. ಗೌರವಾನ್ವಿತ ರಾಷ್ಟ್ರಪತಿಗಳು ಮೋದಿಯವರನ್ನು ಪದಚ್ಯುತಗೊಳಿಸುವವರೆಗೆ ತೀವ್ರ ಸ್ವರೂಪದ ಹೋರಾಟವನ್ನು ನಡೆಸಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ಮಧುಸೂದನ್, ಗಿರೀಶ್, ಅಕ್ಬರ್, ಯುವ ಕಾಂಗ್ರೆಸ್ ಶಿವಮೊಗ್ಗ ವಿಧಾನಸಭೆ ಅಧ್ಯಕ್ಷ ಚರಣ್ ಜಿ ಶೆಟ್ಟಿ, ಉತ್ತರ ಬ್ಲಾಕ್ ಅಧ್ಯಕ್ಷ ಗಿರೀಶ್, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿಗಳಾದ- ರೇಷ್ಮಾ, ಅಬ್ದುಲ್ ಸತ್ತರ್, ಆಕಾಶ್, ಮಲಗೊಪ್ಪ ಶಿವು, ಗೌತಮ್, ಟೋಫಿಕ್, ಬಾಬು, ಅಶೋಕ್, ರವಿ, ಲಿಂಗರಾಜು, ಅಭಿ, ಯುವರಾಜ್, NSUI ನ ಜಿಲ್ಲಾ ಕಾರ್ಯಧ್ಯಕ್ಷ ರವಿ-ಕಾಟಿಕೆರೆ, ನಗರಾಧ್ಯಕ್ಷರ ರವಿ, ಚಂದ್ರೋಜಿ ರಾವ್, ಆದಿತ್ಯ, ಸುಭಾನ್, ಫರಾಜ್, ಶ್ರೀಕಾಂತ್, ಪ್ರತಾಪ್ ನೂರಾರು ಯುವಕರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *