ಮಂಜುನಾಥ್ ಶೆಟ್ಟಿ…

ನವಿಲೇ ಬಸಾಪುರದ ಸರ್ಕಾರಿ ಪ್ರೌಢ ಶಾಲೆಗೆ 2025-26ನೇ ಸಾಲಿನ ಉತ್ತಮ SDMC ಪ್ರಶಸ್ತಿ…

ಮುಖ್ಯ ಶಿಕ್ಷಕರು ಕಿಶೋರ್ ಕುಮಾರ್ ಶೆಟ್ಟಿ…

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ನವಿಲೇ ಬಸಾಪುರ ಶಾಲೆಯು ಈ ವರ್ಷದ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಖ್ಯ ಶಿಕ್ಷಕರಾದ ಕಿಶೋರ್ ಕುಮಾರ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಶಾಲೆಯು 2025-26ನೇ ಸಾಲಿನ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮ SDMC ಪ್ರಶಸ್ತಿಗೆ ಆಯ್ಕೆಯಾಗಿ ಒಂದು ಲಕ್ಷ ರೂಗಳ ನಗದು ಬಹುಮಾನಕ್ಕೆ ಆಯ್ಕೆಯಾಗಿದ್ದು ಈ ಹೆಮ್ಮೆಯ ಶಾಲೆಯ ವಿಶೇಷ.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ನುಡಿಯಂತೆ ಸದಾ ವಿದ್ಯಾರ್ಥಿಗಳನ್ನು ಆಕರ್ಷತ್ತಿರುವ ಶ್ರೀ ನವಿಲೇ ಬಸವೇಶ್ವರನ ಸಾನಿಧ್ಯದಲ್ಲಿ 2007 ನೇ ಸಾಲಿನಲ್ಲಿ ಸ್ಥಾಪನೆಗೊಂಡಿರುವ ಶಾಲೆಯ ಸರ್ಕಾರಿ ಪ್ರೌಢಶಾಲೆ ನವಿಲೇ ಬಸವಪುರ ಮಕ್ಕಳಿಗೆ ನಿರ್ಮಿತ ಮುಕ್ತ ಉಲ್ಲಾಸಕರ ವಾತಾವರಣದಲ್ಲಿ ಆಧುನಿಕ ಕಲಿಕಾ ಉಪಕರಣಗಳನ್ನು ಕಲಿಕಾ ವ್ಯವಸ್ಥೆಯನ್ನು ಮೈಗೂಡಿಸಿಕೊಂಡಿರುವ ಈ ಶಾಲೆ ಉತ್ತಮ ಕಲಿಸುವಿಕೆ ಹಾಗೂ ಉತ್ತಮ ಕಲಿಯುವಿಕೆ ವಾತಾವರಣ ಹೊಂದಿದ್ದು ತಾಲೂಕ್ ಕೇಂದ್ರವಾದ ಉಕ್ಕಿನ ನಗರ ಭದ್ರಾವತಿಯಿಂದ ಸುಮಾರು 10 km ಮತ್ತು ಜಿಲ್ಲಾ ಕೇಂದ್ರ ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿ ಹೊಂದಿದೆ.


ಶಾಲೆಯ ವಿಶೇಷತೆಗಳು…


ಮುಖ್ಯೋಪಾದಾಯರು ಒಳಗೊಂಡಂತೆ ಒಟ್ಟು ಒಂಬತ್ತು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ


ಶ್ರೀ ಬಸವರಾಜ್ SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಗ್ರಾಮಸ್ಥರು ಮತ್ತು ಪೋಷಕರ ನಿರಂತರ ಸಹಕಾರ


ಸದರಿ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 46


ವಿದ್ಯುತ್ ಸಂಪರ್ಕ ಹೊಂದಿರುವ ಸಸಜಿತ ತರಗತಿ ಕೋಣೆಗಳು


ಈ ಶಾಲೆಯಲ್ಲಿ ಎಲ್ಲಾ ರೀತಿಯ ವಿಶೇಷ ಸೌಲಭ್ಯಗಳು ಇರುತ್ತದೆ.

ಒಟ್ಟಿನಲ್ಲಿ ಪ್ರಸಕ್ತ ವರ್ಷದ ಎಸ್ಡಿಎಂಸಿ ಪ್ರಶಸ್ತಿಗೆ ಆಯ್ಕೆಯಾದ ನವಿಲೇ ಬಸಾಪುರ ಶಾಲೆಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಸಮಸ್ತ ಗ್ರಾಮಸ್ಥರು ಮುಖ್ಯ ಶಿಕ್ಷಕರಿಗೆ ಮತ್ತು ಸಮಸ್ತ ಶಿಕ್ಷಕರಿಗೆ ಹೃದಯಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *