ಮಂಜುನಾಥ್ ಶೆಟ್ಟಿ…

ಕರ್ನಾಟಕ ನಾಡು ರಕ್ಷಣಾ ವೇದಿಕೆ 10 ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭ ಅದ್ದೂರಿಯಾಗಿ ನಡೆಯಿತು.

ನಗರದ ಸೈನ್ಸ್ ಮೈದಾನದಿಂದ ಭುವನೇಶ್ವರಿ ದೇವಿಯ ರಥದ ಜಾತ್ರೆ ನೂರಾರು ಆಟೋಗಳೊಂದಿಗೆ ಅಂಬೇಡ್ಕರ್ ಭವನ ತಲುಪಿತು.ನಂತರ ಅಂಬೇಡ್ಕರ್ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯಧ್ಯಕ್ಷರಾದ ಪ್ರಸನ್ನಗೌಡ್ರು ಮತ್ತು ಚಲನಚಿತ್ರ ನಟರಾದ ಧರ್ಮ ಕೀರ್ತಿರಾಜ್ ರವರು ಭಾಗವಹಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅತಿಥಿಗಳು ಕರ್ನಾಟಕ ನಾಡು ರಕ್ಷಣಾ ವೇದಿಕೆ 10 ವರ್ಷಗಳಿಂದ ಪ್ರತಿ ವರ್ಷವೂ ಕನ್ನಡ ನಾಡು ನುಡಿಗಾಗಿ ವಿಶೇಷ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಈ ವರ್ಷ ವಿಶೇಷವೇನೆಂದರೆ ಸಂಘಟನೆಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅಧ್ಯಕ್ಷರಿಗೆ ಮತ್ತು ಸಮಸ್ತ ಪದಾಧಿಕಾರಿಗಳೇ ಶುಭವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥಾಪಕರಾಧ್ಯಕ್ಷರಾದ ಪ್ರಸನ್ನ ಗೌಡ್ರು ಹಾಗೂ ಚಲನಚಿತ್ರ ನಟರಾದ ಧರ್ಮ ಕೀರ್ತಿರಾಜ್ ಫ್ಯಾನ್ ಇಂಡಿಯಾ ಫೈಟ್ ಮಾಸ್ಟರ್ ಡ್ಯಾನಿಲ್ ರಘುರಾಜ್ ಮಲೆನಾಡ್ ಹಾಗೂ ಹಿರಿಯ ಕಲಾವಿದರಾದ ಭಾಸ್ಕರ್ ಹಾಗೂ ಜಿಲ್ಲಾಧ್ಯಕ್ಷರಾದ ದಿನೇಶ್ ಎಸ್ಎಂ ಜಿಲ್ಲಾ ಉಪಾಧ್ಯಕ್ಷರಾದ ಕುಬೇರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕೇತ್ ಎನ್ ಶೇಟ್ ಜಿಲ್ಲಾ ಗೌರವ ಅಧ್ಯಕ್ಷರಾದ ಉಮೇಶ್ ಪಿ ಅವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *