ಮಂಜುನಾಥ್ ಶೆಟ್ಟಿ…

ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಅಪ್ರಾಪ್ತ ಬಾಲಕರಿಂದ ಮತ್ತು ಗಾಂಜಾ ವ್ಯಸನಿಗಳಿಂದ ಹಿಂದೂ ಸಮಾಜದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲಾದ್ಯಂತ ಗಾಂಜಾ ಮಾದಕ ವಸ್ತುಗಳ ಸೇವನೆ ಮತ್ತು ವರ್ಗಾವಣೆ ಅತಿ ಹೆಚ್ಚಾಗಿದೆ ಎಂದು ವಿಶ್ವ ಹಿಂದೂ ಪರಿಷದ್ – ಬಜರಂಗದಳ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ವಿ.ಹೆಚ್.ಪಿ‌. ಅಧ್ಯಕ್ಷ ವಾಸುದೇವ್ ಮಾತನಾಡಿ, ಗಾಂಜಾ ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂದು ವಿ.ಹೆಚ್.ಪಿ. ಜಿಲ್ಲಾಧ್ಯಕ್ಷ ವಾಸುದೇವ ಆರೋಪಿಸಿದರು. ಗಾಂಜಾ ಸೇದುತ್ತಿರುವ ಮುಸ್ಲಿಮರು, ಹಿಂದೂಗಳ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡುತ್ತಿದ್ದಾರೆ. ಕಿರುಕುಳ ಕೊಡುವುದು, ಅವಾಚ್ಯ ಶಬ್ದದಿಂದ ನಿಂದಿಸುವುದು, ಹಿಂದೂಗಳು ಎಲ್ಲಿಯೂ ಸಂಚರಿಸದಂತೆ ನಿರ್ಬಂಧ ಹೇರುತ್ತಿದ್ದಾರೆ ಎಂದರು.

ಹೆಣ್ಣು ಮಕ್ಕಳ ಬಳಿ ಅಶ್ಲೀಲ ವರ್ತನೆ ತೋರಿ ಮುಜುಗರಪಡಿಸುತ್ತಿದ್ದಾರೆ. ಭಯಪಡಿಸುವಂತಹ ನೀಚ ಕೃತ್ಯ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ನಡೆಯುತ್ತಿದೆ. ಇಷ್ಟು ದೌರ್ಜನ್ಯವಾದರೂ ಸಹ ಗಾಂಜಾ ವ್ಯಸನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು.

ಇಂತಹ ವಿಚಾರಗಳಿಂದಾಗಿ ಸಾರ್ವಜನಿಕರು ಸರ್ಕಾರದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ.ಇತ್ತೀಚೆಗೆ ನಡೆದಂತಹ ವಿದ್ಯಾರ್ಥಿ ಸಂಕೇತ್ ಹತ್ಯೆಯು ಕ್ರಿಕೆಟ್ ವಿಚಾರಕ್ಕೆ ಎಂಬುದು ತಪ್ಪು, ಸಂಕೇತ್ ಹತ್ಯೆಯು ಹಿಂದೂ ಬಾಲಕನನ್ನೇ ಹತ್ಯೆ ಮಾಡಲು ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿ ಮಾಡಿರುವ ಕೃತ್ಯವಾಗಿದೆ ಎಂದು ಆರೋಪಿಸಿದರು.

ಶಿವಮೊಗ್ಗದ ಸಾಗರ ತಾಲೂಕಿನಲ್ಲಿಯೂ ಸಹ ಇದೇ ರೀತಿ ಘಟನೆ ಸಂಭವಿಸಿದೆ.ಅಪ್ರಾಪ್ತ ಬಾಲಕರು ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಗಣಪತಿ ಮೆರವಣಿಗೆ ವೇಳೆ ಅಪ್ರಾಪ್ತ ಬಾಲಕರೇ ಗಣಪತಿ ದೇವರಿಗೆ ಎಂಜಲು ಉಗುಳುವಂತಹ ಕೃತ್ಯ ಮಾಡಿದ್ದಾರೆ. ಶಿರಾಳಕೊಪ್ಪದಲ್ಲಿಯೂ ಸಹ ಕೆಲ ಮುಸ್ಲಿಂ ಯುವಕರು ಗಾಂಜಾ ವ್ಯಸನ ಮಾಡಿ, ಹಿಂದೂ ಯುವಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ವಿವರಿಸಿದರು.

ಹಿಂದೂಗಳಿಗೆ ವಿಶ್ವ ಹಿಂದೂ ಪರಿಷದ್ – ಬಜರಂಗದಳ ಸಂಘಟನೆಯು ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಹಿಂದೂಗಳಿಗೆ ದೌರ್ಜನ್ಯವಾಗುತ್ತಿದ್ದರೆ ನಮಗೆ ತಿಳಿಸಿ ಎಂದು ಕರೆ ನೀಡಿದರು. ವಿ.ಹೆಚ್.ಪಿ. – ಬಜರಂಗದಳ ನಿರಂತರವಾಗಿ ನಿಮ್ಮ ಜೊತೆಗಿರುತ್ತದೆ. ನ್ಯಾಯಕ್ಕಾಗಿ ಸಾಮಾಜಿಕ ಸುಧಾರಣೆಗಾಗಿ ತಮ್ಮೊಂದಿಗೆ ನಮ್ಮ ಕಾರ್ಯಕರ್ತರು ಇರುತ್ತಾರೆ. ಪೊಲೀಸರು ಶಿವಮೊಗ್ಗ ಜಿಲ್ಲೆಯನ್ನು ವ್ಯಸನಮುಕ್ತ ಜಿಲ್ಲೆಯನ್ನಾಗಿ ಮಾಡಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ, ಅನ್ಯಾಯವನ್ನು ತಡೆಗಟ್ಟಿ ಎಂದರು.

ಗಾಂಜಾ ಸೇವನೆ ಮಾಡಿ ಹಿಂದೂಗಳನ್ನು ಗುರಿಯಾಗಿಸುತ್ತಿರುವ ಮಾದಕ ವಸ್ತು ವ್ಯಸನಿಗಳಿಗೆ. ಮಾರಾಟಗಾರರಿಗೆ, ತಯಾರಕರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *