ಮಂಜುನಾಥ್ ಶೆಟ್ಟಿ…

ತಾಲೂಕು ಆಸ್ಪತ್ರೆ ಇಲ್ಲದೆ ಇರುವುದರಿಂದ ಶಿವಮೊಗ್ಗ ತಾಲೂಕು ಆಯನೂರು ಹೊಳಲೂರು ಮತ್ತು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ಮರು ವರ್ಗಾವಣೆ ಆದೇಶಿಸುವಂತೆ ಆಗ್ರಹಿಸಿ ಇಂದು ಶಿವಮೊಗ್ಗ ಗ್ರಾಮಾಂತರ ಜಾತ್ಯತೀತ ಜನತಾದಳ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಕ್ಷೇತ್ರವು ವಿಸ್ತೀರ್ಣದಲ್ಲಿ ಅತಿ ದೊಡ್ಡ ಮತಕ್ಷೇತ್ರವಾಗಿದ್ದು ಮತ್ತು ಪರಿಶಿಷ್ಟ ಮೀಸಲು ಕ್ಷೇತ್ರದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅತಿ ಹಿಂದುಳಿದ ವರ್ಗಗಳ ಜನಾಂಗದವರು ಅಲ್ಪಸಂಖ್ಯಾತರು ಹೆಚ್ಚಾಗಿರುವುದರಿಂದ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆ ಇಲ್ಲದಿರುವುದರಿಂದ ಗರ್ಭಿಣಿಯರು ಮತ್ತು ಮಕ್ಕಳು ವಯೋವೃದ್ಧರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.

ಪ್ರಸ್ತುತ ಟ್ರೈಯಾಡ್ ಯೋಜನೆ ಆದೇಶದಂತೆ ತಜ್ಞ ವೈದ್ಯರುಗಳನ್ನು ಸಮುದಾಯ ಆರೋಗ್ಯ ಕೇಂದ್ರದ ತಾಲೂಕಿನ ಆಯನೂರು ಮತ್ತು ಹೊಳಲೂರು ಹಾಗೂ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಜ್ಞ ವೈದ್ಯರುಗಳನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರ ಕ್ಷೇತ್ರಕ್ಕೆ ಯಾವುದೇ ತಜ್ಞ ವೈದ್ಯರನ್ನ ನಿಯೋಜಿಸದೆ ಇರುವುದು ಸಾರ್ವಜನಿಕರು ಪರದಾಡುವಂತಾಗಿದೆ. ಈ ಕುರಿತು ಆರೋಗ್ಯ ಮಂತ್ರಿಗಳು ವಿಧಾನಸಭಾ ಸದನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಒಂದಕ್ಕೆ ಉತ್ತರಿಸುತ್ತಾ ತಾಲೂಕು ಆಸ್ಪತ್ರೆಗಳು ಇಲ್ಲದಿರುವ ತಾಲೂಕುಗಳಲ್ಲಿ ತಜ್ಞ ವೈದ್ಯರುಗಳನ್ನು ವರ್ಗಾವಣೆ ಮಾಡುವುದಿಲ್ಲವೆಂದು ಉತ್ತರ ನೀಡಿರುತ್ತಾರೆ.

ಆದ್ದರಿಂದ 500 ಹೊಳಲೂರು ಹೊಳೆ ಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಮರು ವರ್ಗಾವಣೆ ಆದೇಶ ಮಾಡಬೇಕೆಂದು ಘನ ಸರ್ಕಾರದ ಮಂತ್ರಿ ಮುಖ್ಯಮಂತ್ರಿಗಳಿಗೆ ಈ ಮೂಲಕ ತಿಳಿಸಿ ಎಚ್ಚರಿಸುತ್ತಿರುವುದಾಗಿ ಪಕ್ಷ ಮನವಿಯಲ್ಲಿ ತಿಳಿಸಿದೆ.

ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಪುರ್ಯನಾಯ್ಕ್, ಜಾತ್ಯತೀತ ಜನತಾದಳದ ಉಪಾಧ್ಯಕ್ಷ ಕೆ ವಿ ಪ್ರಸನ್ನ ಕುಮಾರ್, ಶಿವಮೊಗ್ಗ ಗ್ರಾಮಾಂತರ ಜಾತ್ಯಾತೀತ ಜನತಾದಳದ ಅಧ್ಯಕ್ಷ ಕೆಸೆಟ್ಟಿ ಸತೀಶ್, ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷ ರಾಮಕೃಷ್ಣ ಮೊದಲಾದರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *