ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪ್ರೀ-ಪೇಯ್ಡ್ ಆಟೋ ಕೌಂಟರ್‌ಗೆ ಸಂಚಾರಿ ಪೊಲೀಸ್ ಸಿಪಿಐ ದೇವರಾಜ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಿಗೆ, ಪ್ರೀ-ಪೇಯ್ಡ್ ಟಿಕೆಟ್‌ನಲ್ಲಿ ಸೂಚಿಸಲಾದ ದರವನ್ನು ಮಾತ್ರವೇ ಕಡ್ಡಾಯವಾಗಿ ಪಡೆಯಬೇಕು.ಹಾಗೂ ಯಾವುದೇ ಸಂದರ್ಭದಲ್ಲಿಯೂ ಹೆಚ್ಚುವರಿ ಹಣವನ್ನು ಕೇಳಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಯಿತು.
ಇದಲ್ಲದೆ, ಪ್ರೀ-ಪೇಯ್ಡ್ ದರಕ್ಕಿಂತ ಹೆಚ್ಚಿನ ಬಾಡಿಗೆ ಕೇಳಿದಲ್ಲಿ, ಪ್ರಯಾಣಿಕರು ಟಿಕೆಟ್‌ನಲ್ಲಿ ನಮೂದಿಸಿರುವ ಟ್ರಾಫಿಕ್ ಹೆಲ್ಪ್‌ಲೈನ್ ಸಂಖ್ಯೆ 8277983404ಕ್ಕೆ ಆಟೋ ಸಂಖ್ಯೆಯೊಂದಿಗೆ ದೂರು ನೀಡಿದರೆ, ಸಂಬಂಧಿತ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು.
