ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಶೋಭಾ ಮತ್ತು ಅವರ ಸಹೋದ್ಯೋಗಿ ಮನೆ ಸೇರಿದಂತೆ ಒಟ್ಟು 6 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.ನಿರಂತರವಾಗಿ ಶೋಭಾ ಅವರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಶೋಭಾ ಅವರ ನವಲೆ ಮನೆ ಮತ್ತು ಶಿಕಾರಿಪುರದ ಚನ್ನಕೇಶವ ನಗರದ ಮನೆ ತರಲಘಟ್ಟದ ತೋಟದ ಮನೆ ಸಾಗರ ತಾಲೂಕು ಆಚಪುರದ ಮಲ್ನಾಡ್ ಇಂಟರ್ನ್ಯಾಷನಲ್ ಸ್ಕೂಲ್ ಗಳ ಮೇಲೆ ದಾಳಿ ನಡೆಸಲಾಗಿದೆ. ಬಿಸಿಎಂ ಇಲಾಖೆಯ ಅಧಿಕಾರಿ ರಾಘವೇಂದ್ರ ಅವರ ಚಾಲುಕ್ಯ ನಗರದ ಮನೆ ಮತ್ತು ಬಾಲರಾಜ್ ಅರಸು ರಸ್ತೆಯ ದೇವರಾಜ್ ಅರಸು ಭವನದ ಕಚೇರಿಗಳ ಮೇಲು ದಾಳಿ ನಡೆದಿದೆ.
ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರುದ್ರೇಶ್ ಅವರ ಆರು ತಂಡಗಳಲ್ಲಿ ದಾಳಿ ನಡೆಸಿದ್ದಾರೆ. ದಾಳಿ ಸಮಯದಲ್ಲಿ ಅನೇಕ ಮಹತ್ವದ ದಾಖಲೆಗಳು ಪತ್ತೆಯಾಗಿವೆ, ಸಂಜೆಯ ತನಕ ದಾಳಿ ಮುಂದುವರೆಯಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿದ್ದಾರೆ.