ಮಂಜುನಾಥ್ ಶೆಟ್ಟಿ…

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಬೃಹತ್ ಶೋಭಾ ಯಾತ್ರೆ ನಡೆಯಿತು. ನಗರದ ಗೋಪಿ ವೃತ್ತದಲ್ಲಿ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಚಲಿಸಿ ನಂತರ ಉಷಾ ನರ್ಸಿಂಗ್ ಹೋಮ್ ಸರ್ಕಲ್ ನಲ್ಲಿ ಮುಕ್ತಾಯಗೊಂಡಿತ್ತು.ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.

ಸನಾತನ ಧರ್ಮದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಈ ಮೆರವಣಿಗೆಯು ನಗರದಾದ್ಯಂತ ಆಧ್ಯಾತ್ಮಿಕ ಕಳೆಯನ್ನು ತಂದಿತ್ತು. ಮಂಗಳೂರಿನ ಭಜನಾ ತಂಡದ ನೃತ್ಯ ಸಂಕೀರ್ತನೆ, ವಿವಿಧ ಭಜನಾ ಮಂಡಳಿಗಳ ಮಾತೆಯರ ಭಜನೆ ಹಾಗೂ ಪುಭು ಶ್ರೀರಾಮಚಂದ್ರ, ಆಂಜನೇಯ, ಭಾರತ ಮಾತೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ವಿಗ್ರಹಗಳ ಮೆರವಣಿಗೆಯು ಭಕ್ತರಲ್ಲಿ ಹರ್ಷೋದ್ಗಾರ ಮೂಡಿಸಿತು.

ವೇಷಭೂಷಣ ತೊಟ್ಟ ಪುಟಾಣಿ ರಾಮ-ಸೀತೆ-ಹನುಮಂತನ ರೂಪಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಈ ಸಂದರ್ಭದಲ್ಲಿ ಮಾರ್ಗದ ಪ್ರಮುಖ ವೃತ್ತಗಳಲ್ಲಿ ಪುಷ್ಪಾರ್ಚನೆ ನೆರವೇರಿಸಿ, ನಗರದ ಸುಖ-ಶಾಂತಿಗಾಗಿ ಪ್ರಾರ್ಥಿಸಲಾಯಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಹಾಗೂ ಸಹಸ್ರಾರು ಹಿಂದೂ ಧರ್ಮದ ಅಭಿಮಾನಿಗಳೊಂದಿಗೆ ಸಾಗಿದ ಈ ಯಾತ್ರೆಯು ನಮ್ಮ ಸಂಘಟಿತ ಶಕ್ತಿಯ ಪ್ರತೀಕವಾಗಿದೆ.
ಈ ಸಂದರ್ಭದಲ್ಲಿ ಶಾಸಕರು ಸಂಸದರು ಮತ್ತು ವಿಶ್ವಹಿಂದು ಪರಿಷತ್ ಬಜರಂಗದಳ ನೂರಾರು ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
