ಮಂಜುನಾಥ್ ಶೆಟ್ಟಿ…

ಅಕ್ರಮಿತ ಪುಟ್ ಪಾತ್ ತೆರವು ಮಾಡಿ, ನಾಗರಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಆಗ್ರಹ.
ಶಿವಮೊಗ್ಗ ನಗರದ ಕೆ ಆರ್ ಪುರಂ ರಸ್ತೆ ಮತ್ತು ಹಳೆ ತೀರ್ಥಹಳ್ಳಿ ರಸ್ತೆ (OT Road) ಪುಟ್ ಪಾತ್ ಹಾಗು ರಸ್ತೆಯಲ್ಲಿಯೇ ಸ್ಥಾಪಿತವಾಗಿರುವ ಅಂಗಡಿ ಮುಂಗಟ್ಟುಗಳು, ದುರಸ್ತಿ ಗ್ಯಾರೇಜ್ ಗಳು, ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಹೊಸ ಮತ್ತು ಹಳೇ ವಾಹನಗಳಿಂದ ಸಂಚಾರಕ್ಕೆ ತೀವ್ರ ಅಡಚಣೆ. ಕಿರಿದಾದ ರಸ್ತೆ ಮತ್ತು ಫುಟ್ ಪಾತ್ ವ್ಯಾಪಾರಗಳನ್ನು ತೆರುವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಯವರಿಗೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಸದಸ್ಯರ ಮನವಿ ಮಾಡಿದರು.
ಅಮೀರ್ ಅಹಮದ್ ವೃತ್ತ ದಿಂದ ಕೆ.ಆರ್ ಪುರಂ ರಸ್ತೆಯ ಮಾರ್ಗ ಹಾಗೂ ಹಳೆ ತೀರ್ಥಹಳ್ಳಿ ರಸ್ತೆಯ ಮಾರ್ಗ ಅತ್ಯಂತ ಕಿರಿದಾದ ರಸ್ತೆಗಳಾಗಿದ್ದು ಜನ ಸಂಚಾರ ಮತ್ತು ವಾಹನ ಸಂಚಾರಕ್ಕೆ ತೀವ್ರವಾದ ಅಡಚಣೆಯಾಗಿದೆ. ಈ ಮಾರ್ಗಗಳಲ್ಲಿ ಲೆಕ್ಕವಿಲ್ಲದಷ್ಟು ಅನಧಿಕೃತ ದ್ವಿಚಕ್ರ ವಾಹನ ದುರಸ್ತಿ ಗ್ಯಾರೇಜ್ ಗಳು, ಹಣ್ಣಿನ ಅಂಗಡಿಗಳು, ಟ್ರ್ಯಾಕ್ಟರ್ ರಿಪೇರಿ ಗ್ಯಾರೇಜ್ ಗಳು, ಕ್ಯಾಂಟೀನ್ ಗಳು ಇರುವುದನ್ನು ಗಮನಿಸಬಹುದು.
ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಫುಟ್ ಪಾತ್ ಸೇರಿದಂತೆ ರಸ್ತೆಯಲ್ಲಿಯೇ ವಾಹನಗಳ ರಿಪೇರಿ ಕಾರ್ಯ, ಹಣ್ಣಿನ ಅಂಗಡಿಗಳು, ತಳ್ಳುವ ಗಾಡಿಗಳು ಹಾಗೂ ಇತರೆ ವ್ಯಾಪಾರಗಳು ನಿರಂತರವಾಗಿ ನಡೆಯುತ್ತಿದೆ. ಇದರಿಂದ ಈ ರಸ್ತೆಗಳಲ್ಲಿ ಓಡಾಡುವ ನಾಗರೀಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆಯಲ್ಲೇ ವಾಹನಗಳ ರಿಪೇರಿ ಹಾಗೂ ಫುಟ್ ಪಾತ್ ನಲ್ಲಿ ತಾವು ದುರಸ್ತಿ ಮಾಡುವ ವಾಹನಗಳನ್ನು ನಿಲ್ಲಿಸುವುದು, ಮಾರಾಟಕ್ಕೆ ಹೊಸ ಮತ್ತು ಹಳೆಯ ವಾಹನಗಳನ್ನು ನಿಲ್ಲಿಸುವುದರಿಂದ, ಈ ಭಾಗದ ನಾಗರೀಕರಿಗೆ ಪುಟ್ಬಾತ್ ಮತ್ತು ರಸ್ತೆಯನ್ನು ಬಳಸಲು ಸಾಧ್ಯವೇ ಆಗುತ್ತಿಲ್ಲ.
ಇನ್ನು ಕೆಲವರು ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಹೋಟೆಲ್ ಉದ್ಯಮ ಕೂಡಾ ಮಾಡಿಕೊಂಡಿರುತ್ತಾರೆ.
ಈ ಭಾಗದಲ್ಲಿ ಹಣ್ಣಿನ ಮಂಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಹಣ್ಣಿನ ವಾಹನ ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡುವ ಕೆಲಸವೂ ನಿರಂತರವಾಗಿ ನಡೆಯುತ್ತಿರುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಸದರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ದಿನನಿತ್ಯದ ದೊಡ್ಡ ಸಮಸ್ಯೆಯಾಗಿ ನಾಗರೀಕರು ತೀವು ತೊಂದರೆಗೆ ಒಳಗಾಗಿದ್ದಾರೆ.
ಈ ಬಗ್ಗೆ ನಾಗರೀಕರು ಈ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಪತ್ರ ಕೊಟ್ಟರೂ ಯಾವುದೇ ಪ್ರಯೋಜನ ಅಗದೇ ಇರುವುದರಿಂದ ಮನನೊಂದು ಮತ್ತೊಮ್ಮೆ ಈ ಮನವಿ ಪತ್ರವನ್ನು ನೀಡುತ್ತಿದ್ದೇವೆ.
ಅತ್ಯಂತ ಕಿರಿದಾದ ಈ ರಸ್ತೆಗಳಲ್ಲಿ ಒಮ್ಮೆ ಸಂಚರಿಸಿ ನಮ್ಮ ಈ ದೂರಿನ ಬಗ್ಗೆ ತಾವು ಖುದ್ದಾಗಿ ಪರಿಶೀಲನೆ ಮಾಡಿ ರಸ್ತೆ ಮತ್ತು ಫುಟ್ ಪಾತ್ ಗಳನ್ನು ಆಕ್ರಮಿಸಿಕೊಂಡಿರುವ ಅನಧಿಕೃತ ವ್ಯವಹಾರ ಮತ್ತು ದುರಸ್ತಿ ಗ್ಯಾರೇಜ್ ಗಳನ್ನು ತೆರವುಗೊಳಿಸಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಅತ್ಯಂತ ಕಳಕಳಿಯಿಂದ ಮನವಿ ಮಾಡುತ್ತಿದ್ದೇವೆ.
ನಮ್ಮ ಮನವಿಗೆ ತಾವುಗಳು ಶೀಘ್ರ ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ ಎಂದರು.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಮತ್ತು ಕೆಆರ್ ಪುರಂ ಹಾಗೂ ಹಳೆ ತೀರ್ಥಹಳ್ಳಿ ರಸ್ತೆಯ ನಿವಾಸಿಗಳ ಸಂಘಟನೆಗಳ ಪ್ರಮುಖರು ಎಸ್.ಆರ್. ಗೋಪಾಲ್, ಕೆವಿ ವಸಂತ್ ಕುಮಾರ್, ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಜನ್ಮೇಜಿ ರಾವ್, ವಿಜೇಂದ್ರ, ಜನಾರ್ಧನ್ ಪೈ, ವಿನೋದ್ ಪೈ, ಸೀತಾರಾಮ್, ಪರಿಸರ ರಮೇಶ್, ಡಾ.ಶ್ರೀನಿವಾಸ್, ವೆಂಕಟೇಶ್, ಧರಣೇಂದ್ರ ದಿನಕರ್, ನಾಗರಾಜ್, ನಾಗರಾಜ್, ನಾಡಿಗ್, ಚನ್ನವೀರಪ್ಪ ಗಾಮನಗಟ್ಟಿ ಹಾಗೂ ಇತರರು ಉಪಸ್ಥಿತ್ತರಿದ್ದರು.