ಮಂಜುನಾಥ್ ಶೆಟ್ಟಿ…

ವಿಶೇಷಚೇತನರ ಸಾಧನೆಗಳು ಕೂಡ ವಿಶೇಷವಾಗಿದ್ದು, ಅವರ ಸಾಧನೆಗಳನ್ನು ಉತ್ತೇಜಿಸಿ, ಅವರಲ್ಲಿ ಆತ್ಮಸ್ಥೆöÊರ್ಯವನ್ನು ತುಂಬಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಐಕ್ಯೂಎಸಿ ಮಾರ್ಗದರ್ಶನದಲ್ಲಿ ಸಬಲ ವಿಶೇಷಚೇತನರ ಸಬಲೀಕರಣ ಕೋಶ, ಸಿಬಿಆರ್ ಕಾನೂನು ಕಾಲೇಜು ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ಸಮರ್ಪಿತ ಸಕ್ಷಮ್ ಸಂಸ್ಥೆ ಹಾಗೂ ಸಿಸಿಪಿಡಿ, ನವವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016’ರ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ರಾಷ್ಟಿçÃಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ರಾಜ್ಯದಲ್ಲಿ 9 ಲಕ್ಷ ವಿಶೇಷಚೇತನರಿದ್ದಾರೆ. ಅವರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಾ ಬಂದಿದೆ. ನಮ್ಮ ಜಿಲ್ಲೆಯಲ್ಲಿ 23,200 ವಿಶೇಷಚೇತನರು ಇದ್ದು, ಇವರ ಅಭಿವೃದ್ದಿ ಮೊದಲು ನಮ್ಮ ಜಿಲ್ಲೆಯಿಂದಲೇ ಶುರುವಾಗಬೇಕು. ಈ ನಿಟ್ಟಿನಲ್ಲಿ ನಾವೇಲ್ಲೂರು ಶ್ರಮಿಸೋಣ ಎಂದ ಅವರು ತಮ್ಮ ಅನುದಾನದಲ್ಲಿ ಪ್ರತಿ ವರ್ಷ ವಿಶೇಷಚೇತನರ ಅಭಿವೃದ್ದಿಗಾಗಿ ರೂ.10 ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಮಾತನಾಡಿ, ವಿಕಲಚೇತನ ವ್ಯಕ್ತಿಗಳ ಕಾನೂನು ಮತ್ತು ಹಕ್ಕುಗಳ ಬಗ್ಗೆ ಅಧ್ಯಯನ ಕೈಗೊಳ್ಳಬೇಕು ಹಾಗೂ ಅವರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಿಕೊಡಬೇಕು. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಇತಿಹಾಸದಿಂದ ಶುರುವಾಗಿ ಭವಿಷ್ಯದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಇಂತಹ ವಿಶೇಷ ಕಾರ್ಯಾಗಾರಗಳು ಇನ್ನೂ ಹೆಚ್ಚೆಚ್ಚು ನಡೆಯಬೇಕು ಎಂದ ಅವರು ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದರು.


ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಶಿಧರ್ ಎಸ್, ನವದೆಹಲಿಯ ಸಿಸಿಪಿಡಿ ಆಯುಕ್ತರಾದ ಗೋವಿಂದರಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಸುವರ್ಣ ನಾಯಕ್, ಐಕ್ಯೂಎಸಿ ಸಂಚಾಲಕರರಾದ ವಿದ್ಯಾ ಮರಿಯಾ ಜೋಸೆಫ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಸುರೇಶ್ ಅನಗವಾಡಿ ,ಸಕ್ಷಮ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಉಮೇಶ್ ಅಂದಾರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *