ಮಂಜುನಾಥ್ ಶೆಟ್ಟಿ…

ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸುವ (ಅದಲು-ಬದಲು) ಮೂಲಕ ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ತಾತ್ಕಾಲಿಕ ಅನುಮತಿ ನೀಡಿ ಆದೇಶಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದ್ದಾರೆ.


ಸಂಚಾರ ನಿಯಮಗಳು ಮತ್ತು ಷರತ್ತುಗಳು…

  • ಈ ವ್ಯವಸ್ಥೆಯು ಕೇವಲ ಸಾರ್ವಜನಿಕ ಸಂಪರ್ಕ (ಸ್ಟೇಜ್ ಕ್ಯಾರೇಜ್) ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಕೇವಲ 35 ಆಸನವುಳ್ಳ (432 ಸೆಂ.ಮೀ ಚಕ್ರತಳ ಮೀರದ) ಬಸ್ಸುಗಳಿಗೆ ಮಾತ್ರ ತಿರುಗಲು ಅವಕಾಶವಿರುತ್ತದೆ.
  • ವಾಹನ ಬದಲಾವಣೆ ಮಾಡಲು ಪ್ರಯಾಣಿಕರು ಸುಮಾರು 85 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ದಾಟಬೇಕಾಗುತ್ತದೆ. ಈ ಮೆಟ್ಟಿಲುಗಳು ಕಿರಿದಾಗಿರುವುದರಿಂದ ಕೇವಲ ದೈಹಿಕವಾಗಿ ಸದೃಢರಾಗಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು.
  • ಭೂಕುಸಿತ ಸಂಭವಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲ ಹತ್ತಿರವಿರುವುದರಿಂದ ಮೆಟ್ಟಿಲುಗಳಿಗೆ ಹ್ಯಾಂಡ್ ರೈಲ್‌ಗಳನ್ನು ಅಳವಡಿಸಲು ಮತ್ತು ದುರಸ್ತಿ ಮಾಡಲು ಸೂಚಿಸಲಾಗಿದೆ.
  • ಸ್ಥಳದಲ್ಲಿ ತುರ್ತು ಉಪಚಾರಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ.
    ಮಾರ್ಗ ಬದಲಾವಣೆ ವಿವರ
  • ಶಿವಮೊಗ್ಗ-ಹೊಸನಗರ-ನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ವಾಹನಗಳು ಚಂಡಿಕಾ ದೇವಸ್ಥಾನದವರೆಗೆ ಸಂಚರಿಸಬಹುದಾಗಿದ್ದು, ಅಲ್ಲಿ ಸೂಕ್ಷö್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.
  • ಚಂಡಿಕ ದೇವಸ್ಥಾನದ ಒಂದನೇ ತಿರುವಿನಲ್ಲಿ ಭೂ ಕುಸಿತವಾದ ಜಾಗದ ಕೆಳಗಿನ ಮೊದಲನೇ ತಿರುವಿನಲ್ಲಿ ಹಾಲಿ ಇರುವ ಕಾಂಕ್ರಿಟ್ ರಸ್ತೆಯ ಕ್ಯಾರೇಜ್-ವೇ-24 ಅಡಿ ಇದ್ದು ಅದಕ್ಕೆ ಹೊಂದಿಕೊAಡಿರುವ ರಸ್ತೆಯ ಗ್ರಾವೆಲ್ ಶೋಲ್ಡರ್‌ನ್ನು ಸ್ಥಳೀಯ ಸಾರ್ವಜನಿಕರೇ ಕಾಂಕ್ರಿಟ್ ರಸ್ತೆಗೆ ಸಮನಾಗಿ 18 ಅಡಿ ಅಗಲಕ್ಕೆ ಅಗಲೀಕರಣ ಮಾಡಿ ಎತ್ತರಿಸಿ ಮಟ್ಟ ಮಾಡಿರುವುದು ಕಂಡುಬAದಿದ್ದು, ವಾಹನಗಳನ್ನು ಸೂಕ್ಷö್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.
  • ಪ್ರಯಾಣಿಕರು ವಾಹನ ಬದಲಾವಣೆ ಮಾಡಲು ಕಾಲ್ನಡಿಗೆಯಲ್ಲಿ ಓಡಾಡಲು ಪ್ರಸ್ತಾಪಿಸಿರುವ ಮಟ್ಟಿಲುಗಳು ಕಿರಿದಾಗಿದ್ದು ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಗೊಂದಲವಿಲ್ಲದೇ ದೈಹಿಕವಾಗಿ ಸದೃಢವಾಗಿರುವ ಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಬಹುದಾಗಿರುತ್ತದೆ. ಈ ಆದೇಶವು ಏಪ್ರಿಲ್ 14 ರಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *