ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲಾ ಅಬಕಾರಿ ನಿರೀಕ್ಷಕರವರ ಕಛೇರಿ ವತಿಯಿಂದ ಏ.21 ರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ವಲಯ ನಂ-1 ಕಛೇರಿಯ ಅಬಕಾರಿ ಭವನ ಆವರಣದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ 01 ದ್ವಿ ಚಕ್ರ ವಾಹನ, 01 ನಾಲ್ಕು ಚಕ್ರದ ವಾಹನಗಳನ್ನು ಯಥಾಸ್ಥಿತಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ನಿಗಧಿತ ಅವಧಿಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಕಚೇರಿ ವೇಳೆಯಲ್ಲಿ ವಾಹನವನ್ನು ವೀಕ್ಷಿಸಬಹುದು ಎಂದು ಶಿವಮೊಗ್ಗ ವಲಯ ನಂ.1 ರ ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.
