ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ವಕೀಲ ಸಂಘದ 125ನೇ ಶತಮಾನೋತ್ಸವ ರಜತ ಮಹೋತ್ಸವ ಅಂಗವಾಗಿ ವಕೀಲರ ರಾಜ್ಯಮಟ್ಟದ ಕ್ರಿಕೆಟ್ ತ್ರೋಬಾಲ್ ಶೆಟಲ್ ಬ್ಯಾಟ್ಮಿಟನ್ ಪಂದ್ಯಾವಳಿಗಳನ್ನು ಏಪ್ರಿಲ್ 25 ಮತ್ತು 26 ರಂದು ಸಹ್ಯಾದ್ರಿ ಕಾಲೇಜಿ ಕ್ರೀಡಾಂಗಣ ಹಾಗೂ ನೆಹರು ಸ್ಟೇಡಿಯಂ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಜಿ ಆರ್ ರಾಘವೇಂದ್ರ ಸ್ವಾಮಿ ತಿಳಿಸಿದರು.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿವಮೊಗ್ಗ ವಕೀಲರ ಸಂಘಕ್ಕೆ 125 ವರ್ಷವಾಗಿದೆ. ಐದು ಜನರಿಂದ ಆರಂಭವಾದ ಈ ಸಂಘ ಇಂದು 1210 ಸದಸ್ಯರನ್ನು ಹೊಂದಿದ್ದು 125 ವರ್ಷಗಳನ್ನು ಪೂರೈಸಿದೆ ಇದರ ಅಂಗವಾಗಿ ಸಂಘದ ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದರು.
ಶಾಸಕ ಚನ್ನಬಸಪ್ಪ ಸಂಸದ ಬಿ ವೈ ರಾಘವೇಂದ್ರ ಶಾಸಕ ಬಿ ವೈ ವಿಜಯೇಂದ್ರ ಕೆ ಎಸ್ ಈಶ್ವರಪ್ಪ ಹೆಚ್ಚುವರಿ ಅಡ್ವಕೇಟ್ ಜನರಲ್ ಶ್ರೀಕಾಂತ್ ಪಾಟೀಲ್ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದರು.


ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಮೊದಲ ತಂಡಕ್ಕೆ 1 ಲಕ್ಷ ನಗದು ಬಹುಮಾನ ಹಾಗೆಯೇ ಕ್ರಮವಾಗಿ 2ನೇ ಪಡೆದ ಸ್ಥಾನಕ್ಕೆ ಐವತ್ತು ಸಾವಿರ ರೂಪಾಯಿ ಹಾಗೂ ಮೂರನೇ ಸ್ಥಾನಕ್ಕೆ ಮೂವತ್ತು ಸಾವಿರ ಹಾಗೂ ನಾಲ್ಕನೇ ಸ್ಥಾನಕ್ಕೆ ಇಪ್ಪತ್ತು ಸಾವಿರ ನಗದು ಬಹುಮಾನ ಹಾಗೂ ಗೋಪಿಯನ್ನು ನೀಡಲಾಗುತ್ತಿದೆ. ಇದಕ್ಕೆ ಪ್ರವೇಶ ಶುಲ್ಕ 15000 ಇರುತ್ತದೆ ಎಂದರು.


ಹಾಗೆಯೇ ಮಹಿಳೆಯರಗಿ ಏರ್ಪಡಿಸುವ ತ್ರೋಬಾಲ್ ಪಂದ್ಯಾವಳಿಯಲ್ಲಿ ಮೊದಲ ವಿಜೇತರಿಗೆ 15000 ಎರಡನೇ ವಿಜೇತರಿಗೆ 10000 ನಗದು ಬಹುಮಾನ ನೀಡಲಾಗುವುದು. ಏಕೆ ಪ್ರವೇಶ ಶುಲ್ಕ 3000 ಇರುತ್ತದೆ.
ಶಟಲ್ ಬ್ಯಾಡ್ಮಿಂಟನ್ 40 ವರ್ಷದ ಒಳಗಿನವರಿಗೆ ಮೊದಲ ಬಹುಮಾನ 6,000 ಎರಡನೇ ಬಹುಮಾನ 4000.


40ವರ್ಷ ಮೇಲ್ಪಟ್ಟವರಿಗೆ 6 ಮತ್ತು 4 ಸಾವಿರ. ಮಹಿಳಾ ಓಪನ್ ಸ್ಪರ್ಧೆಯಲ್ಲಿ ಮಿಕ್ಸೆಡ್ ಡಬಲ್ ಸ್ಪರ್ಧೆಯಲ್ಲಿ ವಿಜೇತರಿಗೆ 5000 ಮತ್ತು 3000 ಬಹುಮಾನ ಮತ್ತು ಟ್ರೋಪಿಯನ್ನು ನೀಡಲಾಗುವುದು.ಇದಕ್ಕೆ ಪ್ರವೇಶಿ ಶುಲ್ಕ 800 ಇರುತ್ತದೆ ಎಂದು ಮಾಹಿತಿ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಖಜಾಂಚಿ ಮಾಲತೇಶ್ ಉಪಾಧ್ಯಕ್ಷರುಗಳಾದ ಕಿಲಕ ಮಧುಸೂದನ್ ಮತ್ತು ನಂದಿನಿ ದೇವಿ ಸಮಸ್ತ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *