ಮಂಜುನಾಥ್ ಶೆಟ್ಟಿ…

ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಖಾತೆ ಬದಲಾವಣೆ ಶುಲ್ಕ ಹೆಸರಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸುಲುಗೆ ಮಾಡುತ್ತಿದೆ ಎಂದು ಖಂಡಿಸಿ ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಪಾಲಿಕೆ ಆಯುಕ್ತರದ ಮಾಯಣ್ಣ ಗೌಡರವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದಲ್ಲಿ 2006 ರಿಂದ ಪ್ರಾರಂಭಿಸಿ ಇಲ್ಲಿಯವರೆಗೆ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಹಲವು ಪಟ್ಟು ಹೆಚ್ಚಾಗಿ ಖಾತೆ ಬದಲಾವಣೆ ಶುಲ್ಕ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೆ ತೆರಿಗೆದಾರರು ನಿರಂತರ ಸುಲಿಗೆಗೆ ಒಳಗಾಗಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಅನ್ಯತೆಗಳನ್ನು ಸರಿಪಡಿಸಿ ವಂತೆ ಆಯುಕ್ತರಿಗೆ ತಿಳಿಸುತ್ತಾ ಬಂದಿದ್ದರು ಅದು ಈಡೇರಿಲ್ಲ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ರಾಜ್ಯ ಸರ್ಕಾರ ಜನವರಿ 2006 ರಲ್ಲಿಯೇ ನೊಂದಾವಣೆ ಆಸ್ತಿಯ ಮುದ್ರಾಂಕ ಶುಲ್ಕದ ಮೇಲೆ 2ರಷ್ಟು ಖಾತೆ ಬದಲಾವಣೆ ಶುಲ್ಕ ತೆಗೆದುಕೊಳ್ಳಬೇಕು ಎಂದು ಸ್ಪಷ್ಟ ಸುತ್ತೋಲೆ ನೀಡಿದೆ. ಅಲ್ಲದೆ ಈ ಬಗ್ಗೆ ಫೆಬ್ರವರಿ 2020ರಲ್ಲಿ ಮತ್ತೊಮ್ಮೆ ಸುತ್ತೋಲೆ ಹೊರಡಿಸಿ ಮುದ್ರಾಂಕ ಶುಲ್ಕದ ಮೇಲೆ 2ರಷ್ಟು ಬದಲಾವಣೆ ಶುಲ್ಕ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು ಅದಕ್ಕೆ ವಿರುದ್ಧವಾಗಿ ಆಸ್ತಿ ಮೌಲ್ಯದ ಮೇಲೆ ಶೆ ೦.5 ಖಾತೆ ಬದಲಾವಣೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ.
ಇದರಿಂದ ತೆರಿಗೆದಾರರಿಗೆ ಅನ್ಯಾಯಕ್ಕೆ ಒಳಗಾಗಿದ್ದಾರೆ.
ಪಾಲಿಕೆ ಹಗಲು ದರೋಡೆ ಮಾಡುತ್ತಿದೆ. ಅದರಿಂದ ಈ ಕಾನೂನು ಬಾಹಿರ ವಸೂಲಾತಿಯನ್ನು ತಕ್ಷಣ ನಿಲ್ಲಿಸಿ ಅಧಿಕ ಖಾತೆ ಬದಲಾವಣೆ ಶುಲ್ಕವನ್ನು ಖಾತೆದಾರರಿಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
