ಮಂಜುನಾಥ್ ಶೆಟ್ಟಿ…
ಸರ್ಕಾರಿ ವೃತ್ತಿ ಜೀವನದಲ್ಲಿ ಏಪ್ರಿಲ್ 30ರಂದು ನಿವೃತ್ತಿ ಆಗಲಿರುವ ಶ್ರೀಯುತ ನಾಗೇಂದ್ರ ರವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಂದಾಯ ಅಧಿಕಾರಿಯಾಗಿ ಕಂದಾಯ ಉಪ ಆಯುಕ್ತರಾಗಿ ತೆರಿಗೆ ಪಾವತಿಸುವಂತಹ ನಾಗರಿಕರಿಗೆ ಜನಸ್ನೇಹಿ ಅಧಿಕಾರಿಯಾಗಿ ತನ್ನ ಕರ್ತವ್ಯದಲ್ಲಿ ಪಾರದರ್ಶಕ ಹಾಗೂ ಉತ್ತಮ ಕೆಲಸದ ಕಾರ್ಯ ಕ್ಷಮತೆಯಿಂದ ಮತ್ತು ಇವರ ಸಹಪಾಠಿಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ರಾಜ್ಯದಲ್ಲೇ ಈ ಸ್ವತ್ತು ಶಿವಮೊಗ್ಗ ಮಹಾನಗರ ಪಾಲಿಕೆ ನಂಬರ್ 1 ಸ್ಥಾನದಲ್ಲಿ ಇರಲು ಕಾರಣ ಎಂದರೆ ತಪ್ಪಾಗಲಾರದು.
ಪಾಲಿಕೆಗೆ ಇಂತಹ ಅಧಿಕಾರಿ ಸಿಕ್ಕಿರುವುದು ಶಿವಮೊಗ್ಗ ಜನತೆಗೆ ಒಂದು ಸೌಭಾಗ್ಯ ಸರಿ ಇವರ ಪ್ರೀತಿ ವಿಶ್ವಾಸ ಶಿವಮೊಗ್ಗ ಜನತೆ ಎಂದು ಮರೆಯಲಾರರು.ಮುಂದಿನ ಅವರ ನಿವೃತ್ತಿ ಜೀವನವು ಸುಖಕರವಾಗಿ ಸಾರ್ವಜನಿಕ ಜೀವನದಲ್ಲೂ ಸಲಹೆ ಸಹಕಾರ ನೀಡುವಂತಹವರಾಗಿರಲಿ ಎಂದು ಈ ದಿನ ಮಹಾನಗರ ಪಾಲಿಕೆಯ ಅವರ ಕಚೇರಿಯಲ್ಲಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಈ ಅಭಿನಂದನ ಕಾರ್ಯಕ್ರಮದಲ್ಲಿ ಮಾಜಿ ಉಪ ಮಹಾಪೌರರಾದ ಗನ್ನಿ ಶಂಕರ ನಾಗರಿಕ ಸಮಿತಿಯ ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ಪಾಲಿಕೆಯ ಸದಸ್ಯರುಗಳಾದ ಎನ್ ಕೆ ಶ್ಯಾಮ್ ಸುಂದರ್ ಆರ್ ಕೆ ಉಮೇಶ್ ಎಚ್ ಕೃಷ್ಣ ಸಣ್ಣ ಕೈಗಾರಿಕೆ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರಯ್ಯ ನರ್ಸರಿ ರಂಗಸ್ವಾಮಿ ಎನ್ಇಎಸ್ ಹೆಚ್ ಬಿ ಸಿ ಎಸ್ ಕಾರ್ಯದರ್ಶಿ ಪ್ರಭಾಕರ್ ಆಶ್ರಯ ಸಮಿತಿಯ ಮಾಜಿ ಸದಸ್ಯರಾದ ಸೈಯದ್ ಇಫ್ತಿಕರ್ ತೆರಿಗೆ ಪಾವತಿದಾರರಾದ ಚಂದ್ರಶೇಖರ್ ಅಭಿ ಭುವನೇಶ್ವರ್ ಸದಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.