ಶಿವಮೊಗ್ಗ ಮಂಜುನಾಥ್ ಶೆಟ್ಟಿ…

ಲೈಫ್ ಲೈನ್ ಟೆಂಡರ್ ಚಿಕನ್ 49ನೇ ಶಾಖೆ ಶುಭಾರಂಭಗೊಂಡಿದೆ. ಚಿಕ್ಕಮಗಳೂರು ಶಾಸಕರಾದ ಎಚ್ ಡಿ ತಮ್ಮಯ್ಯ ರವರು ನೂತನ ಶಾಖೆಯನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಿಂದ ಚಿಕ್ಕಮಂಗಳೂರಿಗೆ ಬಂದು ಜಿಲ್ಲೆ ರಾಜ್ಯ ದೇಶ ವಿದೇಶದಲ್ಲಿ ಲೈಫ್ ಲೈನ್ ಟೆಂಡರ್ ಚಿಕನ್ ಮಾರಾಟ ಮಳಿಗೆಯನ್ನು ತೆರೆದು ಕಿಶೋರ್ ಕುಮಾರ್ ಹೆಗ್ಡೆ ಅತ್ಯುತ್ತಮ ಯಶಸ್ವಿ ಉದ್ಯಮಿಯಾಗಿದ್ದಾರೆಂದು ಹೇಳಿದರು.


2026 ನೇ ವರ್ಷ ಹೆಗ್ಡೆಯವರಿಗೆ ಜೀವನದಲ್ಲಿ ಸಂತೋಷದ ವರ್ಷ.ಈವರೆಗೆ 1 ಸಾವಿರ ಕೋಟಿ ರೂ ಉತ್ತಮ ವಹಿವಾಟು ನಡೆಸಿದ್ದಾರೆ.ಈ ವರ್ಷದಲ್ಲಿ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಚಿಕ್ಕಮಂಗಳೂರು ನಗರದಲ್ಲಿ ಉತ್ತಮ ಗುಣಮಟ್ಟದ ಚಿಕನ್ ಮಾರಾಟ ಮಾಡುತ್ತಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲೈಫ್ ಲೈನ್ ಸಮೂಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರ ಸಿಬ್ಬಂದಿಗಳನ್ನು ತಮ್ಮ ಕುಟುಂಬದಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.


ಲೈಫ್ ಲೈನ್ ಚಿಕನ್ ಸಂಸ್ಥೆ ಮಾಲೀಕರಾದ ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯ ನೀಡಬೇಕೆಂಬ ಉದ್ದೇಶದೊಂದಿಗೆ ಇಲ್ಲಿ 49ನೇ ಚಿಕನ್ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದೆ. ಅದರಿಂದ ಕಲ್ಯಾಣನಗರ ಹೌಸಿಂಗ್ ಬೋರ್ಡ್ ಸೇರಿದಂತೆ ಈ ಭಾಗದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *