ಮಂಜುನಾಥ್ ಶೆಟ್ಟಿ…

ಸಂಚಾರಿ ಪೊಲೀಸ್ ಸಿಪಿಐ ದೇವರಾಜ್ ನೇತೃತ್ವದಲ್ಲಿ ಶಿವಮೊಗ್ಗ ನಗರದ ಅಲ್ಕೋಳ ಸರ್ಕಲ್‌ನಿಂದ ಡಿ.ವಿ.ಜಿ. ಸರ್ಕಲ್‌ವರೆಗೆ ಇರುವ ಶ್ರೀ ಎಸ್. ಬಂಗಾರಪ್ಪ ರಸ್ತೆಯಲ್ಲಿ, ಸಾರ್ವಜನಿಕ ವಾಹನಗಳು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆ ಎರಡೂ ಬದಿಗಳ ಪುಟ್‌ಪಾತ್ ಹಾಗೂ ರಸ್ತೆ ಮೇಲಿಟ್ಟಿದ್ದ ತಿಂಡಿ ಗಾಡಿಗಳು ಮತ್ತು ಹಣ್ಣಿನ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳ ಸಹಕಾರದೊಂದಿಗೆ ಹಿಂದಿನ ದಿನಗಳಲ್ಲಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು.

ಒಂದು ವಾರ ಕಳೆದ ನಂತರ ಪುನಃ ಒಂದೆರಡು ತಿಂಡಿ ಗಾಡಿ ಮಾಲೀಕರು ಪುನಃ ರಸ್ತೆ ಹಾಗೂ ಪುಟ್‌ಪಾತ್ ಮೇಲೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದ್ದರಿಂದ, ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಈ ದಿನ ಸಂಪೂರ್ಣವಾಗಿ ತೆರವುಗೊಳಿಸಲಾಯಿತು.


ಇದೇ ಸಂದರ್ಭದಲ್ಲಿ, ಎಲ್ಲಾ ಪುಟ್‌ಪಾತ್ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳವನ್ನು ನಿಗದಿಪಡಿಸಿ, ಆ ಸ್ಥಳದಲ್ಲಿ ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *