ಮಂಜುನಾಥ್ ಶೆಟ್ಟಿ…

ಮೇ 8 ರಿಂದ 10 ರವರೆಗೆ ರಾಜ್ಯಮಟ್ಟದ ತಜ್ಞ ವೈದ್ಯರ ಸಮ್ಮೇಳನ, KAPICON-2026, ವನ್ನು “ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯ (SIMS)” ದಲ್ಲಿ ಎ.ಪಿ.ಐ. (API- Association Of Physicians Of India) ಸಹ್ಯಾದ್ರಿ ಶಾಖೆಯಿಂದ ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಡೆಸಿದ ಮೆಟ್ರೋ ಖ್ಯಾತ ವೈದ್ಯ ಡಾ.ಪೃಥ್ವಿ, ಇದಕ್ಕೆ ರಾಜ್ಯಾದ್ಯಂತ 2000ಕ್ಕು ಹೆಚ್ಚು ವೈದ್ಯರು ನೋಂದಾಯಿಸಿದ್ದು, ಭಾಗವಹಿಸಲಿದ್ದಾರೆ. ನೂತನ ಆವಿಷ್ಕಾರ, ಚಿಕಿತ್ಸೆ, ಇತ್ಯಾದಿಗಳ ಬಗ್ಗೆ, ಉಪನ್ಯಾಸ- ಚರ್ಚೆ, ಕಾರ್ಯಗಾರ ಗಳು 3 ದಿನಗಳು ನಡೆಯಲಿವೆ ಎಂದರು.

ರಾಜ್ಯದ ಎಲ್ಲೆಡೆಯಿಂದ ವೈದ್ಯರುಗಳು ಭಾಗವಹಿಸಲಿದ್ದಾರೆ. ಸಾವಿರಕ್ಕೂ ಹೆಚ್ಚು ಸಂಶೋಧನ ಪ್ರಬಂಧ ಗಳನ್ನು ಪ್ರಸ್ತುತ ಪಡಿಸಲಿದ್ದೇವೆ. ದೇಶ-ವಿದೇಶಗಳಿಂದ ನುರಿತ ವೈದ್ಯರು ಉಪನ್ಯಾಸ ನೀಡಲು ಆಗಮಿಸಲಿದ್ದಾರೆ.

ಮೇ 8ರಂದು ರಂದು ಬೆಳಗ್ಗೆ 9 ರಿಂದ 11 ರವರೆಗೆ ಶಿವಮೊಗ್ಗದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತುರ್ತು ಜೀವರಕ್ಷಕ ತರಬೇತಿ (CPR) ಮತ್ತು ಕಾರ್ಯಾಗಾರವನ್ನು Community Medicine Hall – SIMS ನಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು. ಸಂಜೆ 5 ಗಂಟೆಗೆ ಸಮಾವೇಶದ ಉದ್ಘಾಟನೆಯನ್ನು ಖ್ಯಾತ ಹೃದ್ರೋಗ ತಜ್ಞ ವೈದ್ಯ, ಪದ್ಮಶ್ರೀ ಡಾ॥ ಸಿ. ಎನ್ .ಮಂಜುನಾಥ್ ರವರು ನೆರವೇರಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ ಮಹಾಲಿಂಗಪ್ಪ ಬಿ, ಡಾ ಜಿ ನರಸಿಮುಲು, ಡಾ ಜ್ಯೋತಿರ್ಮೋಯ್ ಪಾಲ್, ಡಾ ನಂದಿನಿ ಚಟೆರ್ಜಿ, ಡಾ ವಿರೂಪಾಕ್ಷಪ್ಪ ವಿ, ಡಾ ನಾಗೇಂದ್ರ ಎಸ್, ಇವರುಗಳು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷರಾದ ಡಾ॥ ಎಸ್.ಬಿ. ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಡಾ॥ ಪೃಥ್ವಿ ಬಿ ಸಿ, ಖಜಾಂಚಿ ಡಾ॥ ಮಹೇಶ್ ಮೂರ್ತಿ ಬಿ.ಆರ್, ಡಾ॥ ಶ್ರೀಕಾಂತ್ ಎನ್ ಹೆಗಡೆ, ಡಾ॥ ರವೀಶ್ ಕೆ ಆರ್, ಡಾ॥ ಪರಮೇಶ್ವರ್ ಎಸ್, ಡಾ॥ ಅರವಿಂದ್ ಸಿ. ಎಲ್, ಡಾ॥ ಪ್ರವೀಣ್ ದೇವರಭಾವಿ, ಡಾ॥ರತ್ನಾಕರ್, ಡಾ॥ಪಿ ಕೆ ಪೈ, ಡಾ॥ಡಿ. ಜಿ ಶಿವಕುಮಾರ್ , ಡಾ॥ ಈಶ್ವರಪ್ಪ, ಡಾ॥ ರಮ್ಯ ಭಟ್ ಮತ್ತಿತರ ತಜ್ಞ ವೈದ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *