ಮಂಜುನಾಥ್ ಶೆಟ್ಟಿ…

ಪಂಚರಾಜ್ಯಗಳಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ವಿಜಯಭೇರಿ ಭಾರಿಸಿದ ಹಿನ್ನಲೆಯಲ್ಲಿ ಇಂದು ಶಿವಮೊಗ್ಗ ಜಿಲ್ಲ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವವನ್ನ ಸಭ್ರಮಿಸಲಾಯಿತು. ಪಟಾಕಿ ಹಾಗೂ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆದಿದೆ.

ದುರ್ಗ ಆಯಿ ದೀದಿ ಗಯಿ, ನುಸುಳುಕೋರರಿಗೆ ಎಚ್ಚರ ಬಂಗಾಳದಲ್ಲಿ ಬಿಜೆಪಿ ಸರ್ಕಾರ, ದುರ್ಗಾಮಾತಾಕಿ ಎಂಬ ಘೋಷಣೆ ಮುಗಿಲು ಮುಟ್ಟಿದರೆ ಶಾಮ್ ಪ್ರಕಾಶ್ ಮುಖರ್ಜೀ ಅವರ ಭಾವಚಿತ್ರ ಹಿಡಿದು ಕಾರ್ಯಕರ್ತರು ಸಂಭ್ರಮಿಸಿದರೆ ಮಹಿಳೆಯರು ಬೆಂಡಿನ ತ್ರಿಶೂಲ ಹಿಡಿದುಕೊಂಡು ಭಾಗಿಯಾಗಿದ್ದು ಗಮನ ಸೆಳೆದಿದೆ.

ಈ ವೇಳೆ ಮಾತನಾಡಿ ಶಾಸಕ ಚೆನ್ನಬಸಪ್ಪ, ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವ, ಗೃಹಸಚಿವರ ನೇತೃತ್ವವೇನು ಎಂಬುದನ್ನ ಹೇಳಿಕೊಟ್ಟ ಚುನಾವಣೆ ಈ ಪಂಚರಾಜ್ಯ ಚುನಾವಣೆಯಾಗಿದೆ. ಮತದಾರರು ಬದಲಾವಣೆ ತರುವ ಮೂಲಕ ಪ.ಬಂಗಾಳ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದಿದ್ದಾರೆ. ಪ.ಬಂಗಾಳದಲ್ಲಿ ದೀದಿ ಬರ್ತಾರೆ ನೀವು ಜಾಗಖಾಲಿ ಮಾಡಬೇಕಾಗುತ್ತದೆ ಎಂದು ಟಿಎಂಸಿ ನಾಯಕ ಹೇಳಿಕೊಟ್ಟಿದ್ದ. ಆತ ಈಗ ಅಡಗಿಕೊಂಡು ಕುಳಿತಿದ್ದಾನೆ.

ಬಂಗಾಳದ ಜನ ನೀನು ಎಲ್ಲಿರಬೇಕು ಅಲ್ಲಿ ಇರು ಎಂದು ಮತದಾರ ತೋರಿಸಿಕೊಟ್ಟಿದ್ದಾನೆ. ಕಮ್ಯೂನಿಸ್ಟ್ ರನ್ನ ತೊಲಗಿಸಲು ಟಿಎಂಸಿ ನಾಯಕರನ್ನ ಗೆಲಸಿದರೆ ಪ.ಬಂಗಾಳದಲ್ಲಿ ಹಿಂದೂಗಳ ಮಾರಣಹೋಮ ನಡೆಸಲು ಮುಂದಾಗಿದ್ದರು. ಇದನ್ನ ಅಲ್ಲಿನ‌ಜನ ಮರೆಯಲಿಲ್ಲ. ಇಂದು ಹಿಂದೂ ಎಚ್ಚರಗೊಂಡಿದ್ದಾನೆ. ನಾವು ಶೂನ್ಯದಿಂದ ಮೇಲೆ ಬಂದವರು ಆದರೆ ಟಿಎಂಸಿ ಮೇಲಿನಿಂದ ಕೆಳಗೆ ಇಳಿಯುತ್ತಿದ್ದಾರೆ ಎಂದು ಎಚ್ಚರಿಸಿದರು.

ಅಸ್ಸಾಂ ಸಿಎಂರನ್ನ ಭೇಟಿ ಮಾಡಿದ್ದೆ. ಸೆಂಚ್ಯೂರಿ ಹೊಡೆಯುತ್ತೇವೆ. ಇವತ್ತು ಪ.ಬಂಗಾಳ ನಾಳೆ ಕೇರಳ ಘೋಷಣೆ ಮಾಡಿದ್ದೇವೆ. ನಮಗೆ ಐದು ವರ್ಷ ಕಾಯುವುದು ಕಷ್ಟವಿಲ್ಲ. ಕೇರಳದಲ್ಲಿ ಹಿಂದೂ ಬಿಜೆಪಿ ಕಗ್ಗೊಲೆ ನಡೆದಿದೆ. ಮತದಾರ ಸಮಯ ಕಾಯುತ್ತಿದ್ದಾನೆ. ಬಿಜೆಪಿ ವಿಜಯೋತ್ಸವಕ್ಕೆ ಕಾರ್ಯಕರ್ತನ ಬಲಿದಾನ ಕಾರಣ ಎಂದರು.

ಪ.ಬಂಗಾಳದಲ್ಲಿ ಸಾವಿರಾರು ಜನ ಕಗ್ಗೊಲೆ ನಡೆದಿದೆ. ಇವತ್ತು ಅದಕ್ಕೆ ಉತ್ತರ ಸಿಕ್ಕಿದೆ. ಜನ್ಮೇಪಿ ಪ.ಬಂಗಾಳದಲ್ಲಿ ಬಿಜೆಪಿಯನ್ನ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿಗೆ ಶಕ್ತಿ ನೀಡಲಾಗಿದೆ ಎಂದರೆ ಅದು ದೇಶಕ್ಕೆ ನೀಡಿರುವ ಶಕ್ತಿಯೆಂದರು. ನುಸುಳುಕೋರರಿಗೆ ಇದು ತಕ್ಕ ಉತ್ತರ ಸಹ ಹೌದು ಎಂದರು.

ಸಂಸದ ರಾಘವೇಂದ್ರ ಮಾತನಾಡಿ,ಈ ಚುನಾವಣೆಯಲ್ಲಿ ಗ್ಯಾರೆಂಟಿ ಚಚರ್ಯಾಗಿತ್ತು. ಮೋದಿ ಗ್ಯಾರೆಂಟಿಯ ಮುಂದೆ ಯಾವ ಗ್ಯಾರೆಂಟಿಯೂ ಪಂಚರಾಜ್ಯಗಳಲ್ಲಿ ಕಾಣುತ್ತಿಲ್ಲ. ಭ್ರಷ್ಠಾಚಾರದ ವಿರುದ್ಧ ಪ.ಬಂಗಾಳದ ಮತದಾರ ಉತ್ತರ ನೀಡಿದ್ದಾರೆ. ದ್ವೇಷ ಮತ್ತು ದೇಶ ಭಕ್ತ ಪಕ್ಷದ ನಡುವಿನ ಹೋರಾಟ ಇದಾಗಿದೆ. ಮಹಿಳಾ ಮೀಸಲಾತಿ ಡಿಎಂಎಕೆ, ಕಾಂಗ್ರೆಸ್ ಇದೇ ಟಿಎಂಸಿ ವಿರೋಧಿಸಿದೆ. ಐದು ರಾಜ್ಯದಲ್ಲಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಲಿದೆ. ತಮಿಳು ನಾಡಿನಲ್ಪಿ ಟಿವಿಕೆ ಜೊತೆ ಎಐಡಿಎಂಕೆ ನೇತೃತ್ವದ ಎನ್ ಡಿಎ ಪಕ್ಷದ ಬೆಂಬಲದ ಪಕ್ಷ ಆಡಳಿತಕ್ಕೆ ಬರಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *