ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಿಂದ ಶಿವಪ್ಪ ನಾಯಕ ವೃತ್ತದ ರಸ್ತೆಯಲ್ಲಿದ್ದ(ಬಹುಮಹಡಿ ಕಟ್ಟಡದ ಎದುರಿನ ರಸ್ತೆ) ಹೂವಿನ ಅಂಗಡಿಯನ್ನ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಹಾಗೂ ಮಹಾನಗರ ಪಾಲಿಕೆ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ರಾಜಕಾರಣದ ಒತ್ತಡದ ನಡುವೆಯೂ ಈ ರಸ್ತೆ ತೆರವುಗೊಳಿಸಿರುವುದು ಸಾರ್ವಜನಿಕರ ಮೆಚ್ಚಿಗೆಗೆ ಕಾರಣವಾಗಿದೆ. 6-7 ತಿಂಗಳ ಹಿಂದೆ ರಸ್ತೆಯ ಮೇಲಿರುವ ಹೂವಿನ ಅಂಗಡಿಯನ್ನ ಇಟ್ಟುಕೊಂಡಿದ್ದ ವ್ಯಾಪಾರಿಗಳಿಗೆ ತೆರವಿಗೆ ಸೂಚಿಸಿದರೂ ಸಹ ತೆರವುಗೊಳಿಸಲು ಆಗಿರಲಿಲ್ಲ.
ಆದರೆ ಇಂದು ಜೆಸಿಬಿ ತಂದು ಎಲ್ಲಾ ಹೂವಿನ ಅಂಗಡಿಗಳನ್ನ ತೆರವುಗೊಳಿಸಲಾಗಿದೆ. ಹಲವು ಕಾರಣದಿಂದ ಈ ರಸ್ತೆಯನ್ನ ಬೀದಿ ಮೇಲೆ ವ್ಯಾಪಾರ ಮಾಡುವ ಹೂವಿನ ವ್ಯಾಪಾರಿಗಳಿಗೆ ಬಸ್ ನಿಲ್ದಾಣದ ಎದುರು ಜಾಗ ನೀಡಿದರೂ ಕೆಲವರು ಇಲ್ಲೇ ಉಳಿದಿಕೊಂಡಿದ್ದರು. ಅವರಿಂದ ರಸ್ತೆ ಒತ್ತುವರಿ ಮಾಡಲಾಗಿತ್ತು. ಸಾರ್ವಜನಿಕರಿಗೆ ಪ್ರತಿನಿತ್ಯ ತೊಂದರೆ ಆಗುತ್ತಿತ್ತು.ಈಗ ತೆರವುಗೊಳಿಸಿ ಸಿಪಿಐ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.