ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ಮೆಡಿಕಲ್ ಹಾಗೂ ಎಂಜನಿಯರಿಂಗ್ ತರಬೇತಿಯನ್ನು ನುರಿತ ದೇಶದ ವಿವಿಧ ಐಐಟಿಗಳಲ್ಲಿ ಅಧ್ಯಯನ ಮಾಡಿದ ಉಪನ್ಯಾಸಕರಿಂದ ನೀಡಲು ಗಂಗೋತ್ರಿ ಪದವಿ ಪೂರ್ವ ಕಾಲೇಜು ಸಿದ್ಧವಾಗಿದೆ ಎಂದು ಕಾಲೇಜಿನ ಅಧ್ಯಕ್ಷ ಶ್ರೀ ಎಚ್.ಎಸ್.ಸುಂದರೇಶ ಅವರು ಹೇಳಿದರು.
ಕಾಲೇಜಿನ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಸಾಧ್ಯವಾಗದೇ ಇರುವವರು ಹಾಗೂ ಜೆಇಇ ಪರೀಕ್ಷೆಯಲ್ಲಿ ಆಯ್ಕೆಯಾಗದವರಿಗೆ ಕಾಲೇಜಿನಲ್ಲಿ ವಿಶೇಷ ಲಾಂಗ್ ಟi ತರಬೇತಿಯನ್ನು ಜುಲೈ ಮೊದಲ ವಾರದಲ್ಲಿಯೇ ಮಾಡಲಾಗುತ್ತಿದೆ ಅದರ ನೋಂದಣಿಯನ್ನು ಆರಂಭಿಸಿರುವುದಾಗಿ ಅವರು ತಿಳಿಸಿದರು.
ತಮ್ಮ ನೇತೃತ್ವದಲ್ಲಿ ನೂತನ ಆಡಳಿತ ಮಂಡಳಿ ಆಸ್ತಿತ್ವಕ್ಕೆ ಬಂದ ಅನಂತರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಆಳವಡಿಸಿಕೊಳ್ಳಲಾಗಿದೆ.ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳೆರಡರಲ್ಲೂ ಹೆಚ್ಚಿನ ಅಧ್ಯಯನ ಕೈಗೊಳ್ಳಲು ಅನುಕೂಲವಾಗುವಂತೆ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು, ಈ ಬೋರ್ಡ್‌ಗಳ ಮೂಲಕವಾಗಿ ಮುದ್ರಿತ ಪಠ್ಯ ಹಾಗೂ ಸಚಿತ್ರವಾದ ಅಧ್ಯಯನವನ್ನು ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಹಾಗೆಯೇ ಪ್ರತಿ ತರಗತಿಯ ಕೊಠಡಿಯನ್ನು ಹವಾನಿಯಂತ್ರಿತ ಹೈಟೆಕ್ ವ್ಯವಸ್ಥೆಗೆ ಮೇಲ್ದರ್ಜೆಗೆರಿಸಲಾಗಿದ್ದು, ಇಲ್ಲಿನ ಪ್ರತಿ ವಿದ್ಯಾರ್ಥಿಗೂ ಪ್ರತಿ ದಿನವೂ ತರಗತಿಯ ಸಂದರ್ಭದಲ್ಲಿ ಹೆಚ್ಚಿನ ಓದಿನ ವಾತವರಣವನ್ನು ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾಲೇಜಿನಲ್ಲಿ ನೀಟ್ ಹಾಗೂ ಜೆಇಇ ತರಬೇತಿ ನೀಡಲು ರಾಜಸ್ತಾನ, ಮಹಾರಾಷ್ಟ್ರ, ಇಂಧೋರ್ ಹಾಗೂ ಕೇರಳದ ಹಿರಿಯ ಐಐಟಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇದರ ಜೊತೆಗೆ ರಾಜ್ಯದವರೇ ಆದ ನಾಲ್ವರು ಹಿರಿಯ ಉಪನ್ಯಾಸಕರನ್ನೂ ಸಹ ನೇಮಕ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕ್ಯಾಂಟಿನ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಏಕೆಂದರೆ ನಗರದ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಸಂಜೆಯ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಫಲಿತಾಂಶ ಆಧಾರಿತ ತರಬೇತಿ: ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಫಲಿತಾಂಶ ಆಧಾರಿತವಾಗಿ ತರಬೇತಿ ನೀಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ತರಗತಿ ಮೊದಲ ದಿನದಿಂದಲೇ ಎಲ್ಲ ರೀತಿಯಿಂದಲೂ ತರಬೇತಿಯನ್ನು ನೀಡಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮೆಡಿಕಲ್ ಹಾಗೂ ಎಂಜನಿಯರಿಂಗ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಿಂದಲೂ ನೆರವು ನೀಡಲು ಉಪನ್ಯಾಸಕರಿಂದ ಸೂಕ್ತ ತರಬೇತಿಯ ನೆರವು ಕೊಡಿಸಲು ಸಿದ್ಧರಾಗಿದ್ದೇವೆ ಎಂದರು.
ಸಾಮಾಜಿಕ ನ್ಯಾಯ ಹಾಗೂ ಮಧ್ಯಮ ಮತ್ತು ಕೆಳವರ್ಗವದರ ಆದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಥಮ ಪಿಯು ಪ್ರವೇಶವನ್ನು ನೀಡಲಾಗಿದೆ. ಸುಮಾರು ೬೦ ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳಿಗೆ ಅತಿ ಕಡಿಮೆ ದರದಲ್ಲಿ ಶುಲ್ಕವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ನೀಟ್ ಹಾಗೂ ಜೆಇಇ ಲಾಂಗ್ ಟರ್ಮ್ ತರಬೇತಿ:
ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ವೈದ್ಯಕೀಯ ಹಾಗೂ ಎಂಜನಿಯರಿಂಗ್ ಪ್ರವೇಶ ಪಡೆಯುವ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಜುಲೈ ಮೊದಲನೇ ವಾರದಲ್ಲಿ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ.
ನೀಟ್ ಪ್ರವೇಶ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಜುಲೈ ಮೊದಲ ವಾರದಿಂದ ೧೦ ತಿಂಗಳ ಕಾಲ ತರಬೇತಿಯನ್ನು ನಮ್ಮ ಕಾಲೇಜಿನ ಐಐಟಿ ಹಾಗೂ ಹಿರಿಯ ಉಪನ್ಯಾಸಕರು ನೀಡಲಿದ್ದು, ಇದು ಫಲಿತಾಂಶ ಆಧಾರಿತ ತರಬೇತಿಯನ್ನು ಒಳಗೊಂಡಿರುತ್ತದೆ.
ಯಾರು ಈಗಾಗಲೇ ನೀಟ್ ಪ್ರವೇಶ ಪರೀಕ್ಷೆಯನ್ನು ಹಾಜರಾಗಿ ಉತ್ತಮ ರ‍್ಯಾಂಕ್ ಪಡೆಯಲು ಸಾಧ್ಯವಾಗಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ. ಅಲ್ಲದೆ, ಪ್ರತಿ ತಿಂಗಳ ಫಲಿತಾಂಶ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಮಟ್ಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹತ್ತು ತಿಂಗಳ ಅವಧಿಯ ತರಬೇತಿಯಲ್ಲಿ ಪ್ರಥಮ ಪಿಯು ಹಾಗೂ ದ್ವೀತಿಯ ಪಿಯು ಪಠ್ಯದ ಸಂಪೂರ್ಣ ಮನವರಿಕೆ ಹಾಗೂ ಪರೀಕ್ಷೆಯ ದೃಷ್ಟಿಯಲ್ಲಿ ಹೇಗೆ ಸಿದ್ಧರಾಗಬೇಕು ಎಂಬ ಸಿದ್ಧತೆಯನ್ನು ಹೇಳಿಕೊಡಲಾಗುತ್ತದೆ.
ಹಾಗೆಯೇ ಪ್ರತಿ ವಾರದ ಪರೀಕ್ಷೆಗಳು, ತಿಂಗಳ ಪರೀಕ್ಷೆ ಮತ್ತು ಅಂತಿಮ ದಿನಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಪರೀಕ್ಷೆ ಮಾಡಲು ನೀಟ್ ಮಾದರಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಎಲ್ಲ ಪಠ್ಯ ಹಾಗೂ ಪರೀಕ್ಷೆಗಳ ಜವಾಬ್ದಾರಿಯನ್ನು ನಮ್ಮ ಕಾಲೇಜಿನ ಹಿರಿಯ ಉಪನ್ಯಾಸಕರೇ ನಿರ್ವಹಿಸಲಿದ್ದಾರೆ.
ಇನ್ನು ಡಿಸೆಂಬರ್ ಹಾಗೂ ಜನವರಿಯಲ್ಲಿ ನಡೆಯಲಿರುವ ಜೆಇಇ ಮುಖ್ಯ ಪರೀಕ್ಷೆಗೂ ಆರು ತಿಂಗಳ ತರಬೇತಿಯನ್ನು ಏರ್ಪಡಿಸಲಾಗಿದ್ದು, ಅತ್ಯಂತ ಕಠಿಣವಾಗಿರುವ ಈ ಪರೀಕ್ಷೆಯನ್ನು ಎದುರಿಸಲು ಬೇಕಾದ ಸಿದ್ಧತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಹಾಗೂ ಅತ್ಯಂತ ಕಠಿಣವಾದ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬ ಮನೋಸ್ಥೈರ್ಯವನ್ನು ಬೆಳಸಲಾಗುತ್ತದೆ.
ಈ ತರಬೇತಿಯಲ್ಲಿ ನೀಟ್ ಪರೀಕ್ಷೆಗೆ ನೀಡಲಾಗುವಂತೆ ವಾರದ, ತಿಂಗಳ ಹಾಗೂ ಅಂತಿಮ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಈ ಎರಡೂ ಪರೀಕ್ಷೆಗಳಿಗೆ ಪ್ರತ್ಯೇಕ ತರಬೇತಿಯನ್ನು ನೀಡಲಾಗುತ್ತಿದ್ದು, ಎನ್‌ಐಟಿ ಹಾಗೂ ಐಐಟಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆ ತೆಗದುಕೊಂಡು ಯಾವುದೇ ರ‍್ಯಾಂಕ್ ಪಡೆಯಲು ಸಾಧ್ಯವಾಗದೇ ಇರುವ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವನ್ನು ನೀಡಲಾಗುತ್ತಿದೆ.
ಜುಲೈ ಮೊದಲವಾರದಿಂದಲೇ ಈ ಎರಡೂ ಪ್ರವೇಶ ಪರೀಕ್ಷೆಯ ತರಬೇತಿ ಆರಂಭವಾಗಲಿದ್ದು, ತರಬೇತಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಐಐಟಿ ನುರಿತ ಹಿರಿಯ ಉಪನ್ಯಾಸಕರು, ಸಂಸ್ಥೆಯ ಖಚಾಂಚಿ ಶ್ರೀಯುತ ದಿನೇಶ್‌ಪಟೇಲ್, ನಿರ್ದೇಶಕರಾದ ಸುಬ್ರಮಣ್ಯಸ್ವಾಮಿ ಹಾಗೂ ಕಾರ್ಯದರ್ಶಿ ಶ್ರೀ ಜಗದೀಶ ಮತ್ತು ಆಡಳಿತಾಧಿಕಾರಿ ಶ್ರೀಮತಿ ರೂಪ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರೇಣುಕಾರಾಧ್ಯ ಎಲ್ಲರನ್ನು ಸ್ವಾಗತಿಸಿದರು.