ಮಂಜುನಾಥ್ ಶೆಟ್ಟಿ…

“ವಿಶ್ವ ತಂಬಾಕು ಮುಕ್ತ ದಿನ – 2026” ರ ಅಂಗವಾಗಿ ಇಂದು ಬೆಂಗಳೂರಿನ “ಸಂತ ಮಾರ್ಥಸ್ ಆಸ್ಪತ್ರೆ”ಯ ಆವರಣದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಾಕಥಾನ್ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಸ್, ಮಧು ಬಂಗಾರಪ್ಪ ಚಾಲನೆ ನೀಡಿದರು.

ಇಂದಿನ ಯುವ ಜನತೆ ತಂಬಾಕಿನ ವ್ಯಸನಕ್ಕೆ ಒಳಗಾಗದೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ (WHO) 1987 ರಲ್ಲಿ ಜಾಗತಿಕವಾಗಿ ತಂಬಾಕಿನಿಂದ ಬರುವ ಮಾರಕ ಕಾಯಿಲೆಗಳನ್ನು ತಡೆಗಟ್ಟಲು ‘ವಿಶ್ವ ತಂಬಾಕು ಮುಕ್ತ ದಿನ’ವನ್ನು ಜಾರಿಗೆ ತಂದಿತು. ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಜಾಗತಿಕವಾಗಿ ಹರಡುತ್ತಿರುವ ತಂಬಾಕು ಪಿಡುಗಿನ ವಿರುದ್ಧ ಧ್ವನಿ ಎತ್ತುವುದು ಇದರ ಮುಖ್ಯ ಉದ್ದೇಶವಾಗಿದೆ.

ಹೃದ್ರೋಗ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಕಾರಣವಾಗುವ ತಂಬಾಕು ಸೇವನೆಯನ್ನು ತ್ಯಜಿಸುವುದು ಅತ್ಯಗತ್ಯ. ಕಠಿಣ ತಂಬಾಕು ನಿಯಂತ್ರಣ ನೀತಿಗಳೊಂದಿಗೆ, ಆರೋಗ್ಯಕರ ದೇಹ, ಸ್ವಚ್ಛ ಪರಿಸರ ಮತ್ತು ಉತ್ತಮ ಭವಿಷ್ಯಕ್ಕಾಗಿ ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಪಣತೊಡೋಣ ಎಂದು ಮಧು ಬಂಗಾರಪ್ಪನವರು ತಿಳಿಸಿದರು.

Leave a Reply

Your email address will not be published. Required fields are marked *