ಮಂಜುನಾಥ್ ಶೆಟ್ಟಿ…
ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00 ರಿಂದ 5.00ರವರೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಬಂದಿ ಕಲಾವಿದರಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಜೈಲು ಹಕ್ಕಿಗಳ ಗಾನಸುಧೆ ಎಂಬ ಶೀರ್ಷಿಕೆಯಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅಪರಾಧವನ್ನು ದ್ವೇಷಿಸು, ಅಪರಾಧಿಯನ್ನಲ್ಲ ಎಂಬ ತತ್ವದಡಿಯಲ್ಲಿ ಬಂದಿಗಳ ಮನಃಪರಿವರ್ತನೆಗಾಗಿ ಸಕಾರಾತ್ಮಕ ಸುಧಾರಣೆಯೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಸೇರಿಸುವುದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಧ್ಯೇಯವಾಗಿರುತ್ತದೆ. 20 ಜನ ಬಂದಿಗಳನ್ನು ಉತ್ತಮ ಹಾಡುಗಾರರೆಂದು ಗುರುತಿಸಿ ಹಾಡುಗಳನ್ನು ಹಾಡಲು ಅಕಾಶ ಕಲ್ಪಿಸಲಾಗಿದ್ದು, ಹಾಡುಗಳೊಂದಿಗೆ ಅವರ ಬದುಕಿನ ಪರಿವರ್ತನ ಸನ್ನಿವೇಶಗಳನ್ನು ಮತ್ತು ಮುಕ್ತ ಮನಸ್ಸಿನ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಆಸಕ್ತ ಕೇಳುಗರು ತಮ್ಮ ಮೊಬೈಲ್‌ನಲ್ಲಿ “NEWS ON AIR APP” ಡೌನ್ಲೋಡ್ ಮಾಡಿಕೊಂಡು 103.5 MHz and 101.4 MHz Frequency ಇಲ್ಲಿ ಕಾರ್ಯಕ್ರಮವನ್ನು ಕೇಳಬಹುದಾಗಿರುತ್ತದೆ.
ಪ್ರಚಾರದ ಆಡಿಯೋ ಲಿಂಕ್ https://www.image2url.com/r2/default/audio/1780556525429-149a6f75-62fb-4bf0-b385-3f0f40966105.mp3
ಸಾರ್ವಜನಿಕರು ಈ ಕಾರ್ಯಕ್ರಮವನ್ನು ಕೇಳಿ, ಆನಂದಿಸಿ, ಪ್ರೋತ್ಸಾಹಿಸುವಂತೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.