ಮಂಜುನಾಥ್ ಶೆಟ್ಟಿ…

ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲೆಯ ಗಾರಗ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ದಲಿತ ಹೆಣ್ಣು ಮಗಳು ಲವ್ ಜಿಹಾದ್ ಪ್ರಕರಣಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಮಂತ್ರಿಗೆ ಮನವಿ ಸಲ್ಲಿಸಿದರು.


ನಹೀಮಾ ಎಂಬಾತ ಅಪ್ರಾಪ್ತೆ ಪೂರ್ಣಿಮಾ ಎಂದು ದಲಿತ ಹೆಣ್ಣು ಮಗಳನ್ನು ಪ್ರೀತಿಸುತಾಗಿ ಹೇಳಿ ಸಲಿಗೆ ಬೆಳಸಿ ಕೊಂಡು ದೈಹಿಕ ಶೋಷಣೆ ನಡೆಸಿದ್ದು ಪೂರ್ಣಿಮಳ ತಂದೆ ತಾಯಿ ಇಬ್ಬರಿಗೂ ಬುದ್ಧಿವಾದ ಹೇಳಿ ಬಿಡಿಸಿದ್ದರು.
ಆದರೆ ಸ್ವಲ್ಪ ದಿನದಲ್ಲಿ ಮತ್ತೆ ನಹೀಮ್ ಅಪ್ರಾಪ್ತೆ ಆಮೇಷಗಳ ಮೂಲಕ ಪ್ರೇಮ ಪ್ರಕರಣದಲ್ಲಿ ಸಿಲುಕಿಕೊಂಡು ಸಂಪ್ರದಾಯದಂತೆ ಬುರ್ಖ ಹಾಕಿಸಿ ತಿರುಗುತ್ತಿದ್ದ ಖಾಸಗಿ ದೃಶ್ಯ ವಾಹಿನಿಯಲ್ಲಿ ಪ್ರಸರಣ ಕೂಡ ಆಗಿತ್ತು.


ಆದರೆ ಪೂರ್ಣಿಮಾ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಸಂಬಂಧಿಸಿದ ಆರೋಪಿ ನಹೀಂ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಇದುವರೆಗೆ ಈತನನ್ನು ಬಂಧಿಸಲು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇಂತಹ ಪ್ರಕರಣಗಳು ರಾಜ್ಯದಲ್ಲಿ ಇತ್ತೀಚಿಗೆ ನಡೆಯುತ್ತಿದ್ದು ವಿದ್ಯಾರ್ಥಿನಿಯರು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಆದ್ದರಿಂದ ಈ ಲವ್ ಜಿಹಾದ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯವನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೇನೆಯ ರಾಜ್ಯಧ್ಯಕ್ಷ ರವಿಪ್ರಸಾದ್ ಜಿಲ್ಲಾಧ್ಯಕ್ಷ ಮಧುಸೂದನ್ ಪ್ರಮುಖರಾದ ಅಭಿಷೇಕ್ ನವಲೆ ನೂರುಲ ಭರತ್ ವೆಂಕಟೇಶ್ ಪ್ರಶಾಂತ್ ಮುಕುಂದ ರಘು ಗೋಪಿ ಲೋಕೇಶ್ ರಫೀಕ್ ನಯಾಜ್ ಮಹೇಶ್ ಮುಂತಾದವರು ಉಪಸ್ಥಿರಿದರು.

Leave a Reply

Your email address will not be published. Required fields are marked *