ಮಂಜುನಾಥ ಶೆಟ್ಟಿ…

ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ, ಮತ್ತು ಅಕ್ರಮ ಸಾಗಾಣಿಕೆ ವಿರೋಧಿ, ದಿನದ ಪ್ರಯುಕ್ತ 25ರಂದು ಬೆಳಗ್ಗೆ 06:00 ಗಂಟೆಗೆ ಶಿವಮೊಗ್ಗ ನಗರದಲ್ಲಿ, ಮ್ಯಾರಥಾನ್ ಹಮ್ಮಿಕೊಂಡಿದ್ದು , ಮ್ಯಾರಥಾನ್ ಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಮೈಧಾನದಿಂದ ಶ್ರೀ ನಿಖಿಲ್ ಬಿ ಐಪಿಎಸ್, ಮಾನ್ಯ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಹಾಗೂ ಶ್ರೀ ಹೇಮಂತ್.ಎನ್ (IAS) (CEO) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಶಿವಮೊಗ್ಗ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಎ ಜಿ ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸಹಾ ಉಪಸ್ಥಿತರಿದ್ದರು.

ಮ್ಯಾರಥಾನ್ ಓಟ ನಗರದ ಅಶೋಕ ವೃತ್ತದಿಂದ ಎಎ ವೃತ್ತ ನಂತರ ಗೋಪಿ ವೃತ್ತ ಅಲ್ಲಿಂದ ಜೈಲ್ ವೃತ್ತ ನಂತರ ಹೆಲಿಪ್ಯಾಡ್ ವೃತ್ತದ ಮುಖಾಂತರ ಡಿಎಆರ್ ಗೆ ಬಂದು ಮ್ಯಾರಥಾನ್ ಅನ್ನು ಮುಕ್ತಾಯ ಮಾಡಲಾಯಿತು. ನಂತರ ವಿಜೇತರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.


ಮ್ಯಾರಥಾನ್ ನಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *